
ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ದಿ. ಜನಾರ್ದನ ಚಂಡ್ತಿಮಾರ್‌ಗೆ ‘ನುಡಿನಮನ’
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.) ಮಂಗಳೂರು ಇದರ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ನುಡಿನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ಗೌರವಾಧ್ಯಕ್ಷ ಶಿವಾನಂದ ಬಲ್ಲಾಳ್ ಬಾಗ್, ಆದಿದ್ರಾವಿಡ ಸಮಾಜ ಸೇವಾ ಸಂಘ ಬಂಟ್ವಾಳತಾಲೂಕು ಅಧ್ಯಕ್ಷ ಸಂತೋಷ್ ಭಂಡಾರಿಬೆಟ್ಟು, ಬಂಟ್ವಾಳ ಆದಿದ್ರಾವಿಡ ನೌಕರರ ಸಂಘದ ಅಧ್ಯಕ್ಷ ರಾಮ ಚೆಂಡ್ತಿಮಾರ್, ಮಾಜಿ ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ. ತುಂಗಪ್ಪ ಬಂಗೇರ, ಸೋಮನಾಥ ಉಪ್ಪಿನಂಗಡಿ,
ಶೇಖರ್ ಕುಕ್ಕೇಡಿ,ಕೆಪಿಸಿಸಿ ಸದಸ್ಯ ಪಿಯೂಷ್ ಎಲ್ ರೊಡ್ರಿಗಸ್, ಜಿಲ್ಲಾ ಕಾಂಗ್ರೆಸ್ ಸಮಿತಿಯ
ಎಸ್.ಸಿ. ಘಟಕ ಅಧ್ಯಕ್ಷ ದಿನೇಶ್ ಮೂಳೂರು ಮತ್ತು ಆದಿದ್ರಾವಿಡ ಸಮುದಾಯದ ಮುಖಂಡರು, ದಲಿತ ನಾಯಕರು, ಸಾಮಾಜಿಕ ಕಾರ್ಯಕರ್ತರು, ಹಿತೈಶಿಗಳು ಕುಟುಂಬಸ್ಥರು ಉಪಸ್ಥಿತರಿದ್ದು, ಪುಪ್ಪ ನಮನ ಸಲ್ಲಿಸಿದರು.
ಚಂದ್ರಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.