ಹಿ.ಜಾ.ವೇ.ಯಿಂದ ಬಿ.ಸಿ.ರೋಡಿನಲ್ಲಿ ಪಂಜಿನ ಮೆರವಣಿಗೆ
Friday, August 15, 2025
ಬಂಟ್ವಾಳ: ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿ.ಸಿ ರೋಡಿನಲ್ಲಿ ಗುರುವಾರ ರಾತ್ರಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಹೊರಟ ಪಂಜಿನಮೆರವಣಿಗೆ ಬಿ.ಸಿ.ರೋಡ್ ರಾಜಾರಸ್ತೆಯಲ್ಲಿ ಸಾಗಿಬಂದು ‘ಸ್ಪರ್ಶ ಕಲಾ ಮಂದಿರ’ದಲ್ಲಿ ಸಮಕೊನ್ನಗೊಂಡಿತು. ಮಳೆಯನ್ನು ಲೆಕ್ಕಿಸದೆ ಕಾರ್ಯಕರ್ತರು, ಯುವಕರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಟೆಮಾರು ಮಂತ್ರದೇವತಾ ಕ್ಷೇತ್ರ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರು ಅವರು ವಹಿಸಿ ಮಾತನಾಡಿದರು.
ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೋನಪ್ಪ ಪೂಜಾರಿ ಅತಿಥಿಯಿಯಾಗಿ ಭಾಗವಹಿಸಿದ್ದು, ನ್ಯಾಯವಾದಿ, ಹಿಂದು ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಮಂಗಳೂರು ದಿಕ್ಸೂಚಿ ಭಾಷಣ ಮಾಡಿದರು.ಹಿ.ಜಾ.ವೇ.ಯ ಬಂಟ್ವಾಳ ತಾಲೂಕು ಪ್ರಮುಖರು ಉಪಸ್ಥಿತರಿದ್ದರು.