ಕಾಂಗ್ರೆಸ್‌ನಿಂದ ‘ಸಂವಿಧಾನ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ’ ಪಥಸಂಚಲನ
ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಬಿ.ಸಿ.ರೋಡು ಮೇಲ್ಸ್‌ತುವೆಯ ತಳಭಾಗದಿಂದ ಆಡಳಿತಸೌಧದವರೆಗೆ ಪಥ ಸಂಚಲನ ನಡೆಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷರೂ ಆದ ರಮಾನಾಥ ರೈ ಅವರು ಮಹಾತ್ಮಗಾಂಧಿಯವರ ಸಹಿತ ಹಲವು ಜಾತ್ಯಾತೀತ ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಇಂದಿನ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ನಡೆಸಲಾಗುತ್ತಿದೆ ಎಂದರು.
ರಾಹುಲ್ ಈ ವಿಚಾರದಲ್ಲಿ ಆಟಂಬಾಂಬ್ ಅಲ್ಲ ನ್ಯೂಕ್ಲಿಯರ್ ಬಾಂಬನ್ನೇ ಹಾಕಿದ್ದಾರೆ.
ಓರ್ವ ಜವಬ್ದಾರಿಯತ ವಿಪಕ್ಷ ನಾಯಕನಾಗಿ ರಾಹುಲ್ ಎತ್ತಿದ ಲೋಪಕ್ಕೆ ಚುನಾವಣಾ ಆಯೋಗ ನೋಟೀಸ್ ನೀಡಿದೆ.ಆದರೆ ಈ ಕುರಿತು ಲಿಂಬಾವಳಿಯವರು ನೀಡಿರುವ ಉತ್ತರ ಚುನಾವಣಾ ಆಯೋಗದ ತಪ್ಪು ಒಪ್ಪಿಕೊಂಡು ಪುಷ್ಟಿಕರಣ ನೀಡುವ ಕೆಲಸ ಆಗಿದ್ದು, ಇವರಿಗೆ ಆಯೋಗ ನೋಟಿಸ್ ಜಾರಿಗೊಳಿಸುವ ಧೈರ್ಯ ಮಾಡಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಮಾಜಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರಜೈನ್, ಪಕ್ಷದ ಮುಖಂಡರಾದ ಪಿಯೂಸ್ ಎಲ್. ರೋಡ್ರಿಗಸ್, ಸಂಜೀವ ಪೂಜಾರಿ ಬೊಳ್ಳಾಯಿ, ಅಬ್ಬಾಸ್ ಆಲಿ, ನವಾಜ್ ಬಡಕಬೈಲ್, ಐಡಾ ಸುರೇಶ್, ಲವೀನಾ ವಿಲ್ಮಾ ಮೋರಸ್, ಸುರೇಶ್ ಕುಲಾಲ್ ನಾವೂರ, ವೆಂಕಪ್ಪ ಪೂಜಾರಿ ಬಂಟ್ವಾಳ, ಜಗದೀಶ್ ಭಂಡಾರಿಬೆಟ್ಟು, ಅಮ್ಮು ಅರ್ಬಿಗುಡ್ಡೆ, ಕರೀಂ ಬೊಳ್ಳಾಯಿ, ಮಧುಸೂದನ್ ಶೆಣೈ ಮತ್ತಿತರರು ಇದ್ದರು.