ತೆಂಗಿನಕಾಯಿ, ಅಡಕೆ ಕಳವು
Wednesday, August 6, 2025
ಬಂಟ್ವಾಳ: ತೋಟದ ಮನೆಯಲ್ಲಿ ದಾಸ್ತಾನಿಟ್ಟಿದ್ದ ತೆಂಗಿನಕಾಯಿ, ಅಡಕೆ ಸಹಿತ ನಗದನ್ನು ಕಳವುಗೈದ ಘಟನೆ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿರುವ ಚಂದ್ರಹಾಸ ಪಲ್ಲಿಪಾಡಿ ಅವರ ತೋಟದ ಮನೆಯಲ್ಲಿ ನಡೆದಿದೆ.
ಕೃಷಿ ಕಾರ್ಮಿಕರಿಬ್ಬರು ತೋಟದ ಮನೆಯಲ್ಲಿದ್ದು, ಅವರು ಆ.೪ ರಂದು ಮದ್ಯಾಹ್ನ ಊಟ ಮಾಡಿ ಕೃಷಿ ಜಮೀನಿಗೆ ಕೆಲಸಕ್ಕೆ ಹೋಗಿ ಸಂಜೆ ವಾಪಾಸ್ ಬಂದಾಗ ಮನೆಯ ಹಿಂದಿನ ಬಾಗಿಲು ತೆರೆದ ಸ್ಥಿತಿಯಲ್ಲಿತ್ತೆಂದು ದೂರಿನಲ್ಲಿ ತಿಳಿಸಲಾಗಿದೆ.
ಒಳಗೆ ಹೋಗಿ ಪರಿಶೀಲಿಸಿದಾಗ ಸುಮಾರು ೫೦ ತೆಂಗಿನ ಕಾಯಿ, ಸುಲಿಯದೆ ಇಟ್ಟಿದ್ದ ೩ ಚೀಲ ಅಡಿಕೆ ಕಿಟಕಿಯಲ್ಲಿರಿಸಿದ್ದ ೧೫೦೦ ನಗದು ಹಾಗೂ ತೆಂಗಿನ ಕಾಯಿ ಸುಲಿಯುವ ಸಾಧನವನ್ನು ಕಳವುಗೈಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.