
ಸಂಗೀತ ಸಾಧನೆ
Monday, August 25, 2025
ಬೆಳ್ತಂಗಡಿ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ 2024-25ನೇ ಸಾಲಿನ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಚರಿಷ್ಮ. ಬಿ.ಎಸ್. ಇವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಅವರು ಹಂಸಧ್ವನಿ ಸಂಗೀತ ಸ್ವರಂ ಕಲಾಶಾಲೆ ಬೆಳ್ತಂಗಡಿ ಇಲ್ಲಿಯ ಸಂಗೀತ ಗುರು ವಿಜಯಲಕ್ಷ್ಮಿ ರಾವ್. ಪಿ. ಇವರಲ್ಲಿ ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾರೆ. ಈಕೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಇಲ್ಲಿನ ೮ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಕೆ.ಎಸ್. ಆರ್.ಟಿ.ಸಿ. ಉದ್ಯೋಗಿ ಬಾಬು ಸಪಲ್ಯ ಮತ್ತು ಜಯಶ್ರೀ ದಂಪತಿ ಪುತ್ರಿ.