
ಪದ್ಮಲತಾ ಕೊಲೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆಯಾಗುವ ವಿಶ್ವಾಸವಿದೆ
ಬೆಳ್ತಂಗಡಿ: ಪದ್ಮಲತಾ ಕೊಲೆಯಾಗಿ 39 ವರ್ಷಗಳು ಕಳೆದಿವೆ. ಈಗಲೂ ಸೂಕ್ತ ತನಿಖೆ ನಡೆದರೆ ಸತ್ಯ ಹೊರಬಂದು ಆರೋಪಿಗಳಿಗೆ ಶಿಕ್ಷೆಯಾಗುವ ವಿಶ್ವಾಸವಿದೆ ಎಂದು ಕೊಲೆಯಾದ ಪದ್ಮಲತಾ ಸಹೋದರಿ ಇಂದ್ರಾವತಿ ಹೇಳಿದ್ದಾರೆ.
ಪದ್ಮಲತಾ ಸಾವಿನ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ಆಗ್ರಹಿಸಿ ಎಸ್‌ಐಟಿಗೆ ದೂರು ನೀಡಲು ಆಗಮಿಸಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪದ್ಮಲತಾ ಪ್ರಕರಣದಲ್ಲಿ ಈ ಹಿಂದೆ ಹಲವು ಹಂತದ ತನಿಖೆಗಳು ನಡೆದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಸಿಒಡಿ ತನಿಖೆ ನಡೆಸಿ ’ಪತ್ತೆಯಾಗದ ಪ್ರಕರಣ’ ಎಂದು ವರದಿ ಮಾತನಾಡುತ್ತಿದ್ದರು. ಪದ್ಮಲತಾ ಪ್ರಕರಣದಲ್ಲಿ ಈ ಹಿಂದೆ ಹಲವು ಹಂತದ ತನಿಖೆಗಳು ನಡೆದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಸಿಒಡಿ ತನಿಖೆ ನಡೆಸಿ ’ಪತ್ತೆಯಾಗದ ಪ್ರಕರಣ’ ಎಂದು ವರದಿ ನೀಡಿದ್ದಾರೆ.
ಇದೀಗ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರಕಾರ ಎಸ್‌ಐಟಿ ರಚಿಸಿದೆ. ಈ ಎಸ್‌ಐಟಿ ತನಿಖೆ ನಡೆಸಿದರೆ ಪದ್ಮಲತಾ ಸಾವಿನ ಪ್ರಕರಣದ ಆರೋಪಿಗಳನ್ನು ಕಾನೂನಿನ ಮುಂದೆ ತರಬಹುದು ಎಂಬ ವಿಶ್ವಾಸವಿದೆ. ಎಸ್‌ಐಟಿ ಪ್ರಕರಣದ ತನಿಖೆ ಕೈಗೆತ್ತಿಕೊಂಡರೆ ನಮ್ಮ ಬಳಿ ಇರುವ ಸಾಕ್ಷ್ಯಗಳು ಹಾಗೂ ಮಾಹಿತಿಗಳನ್ನು ತನಿಖಾ ತಂಡಕ್ಕೆ ನೀಡಿದ್ದೇವೆ ಎಂದು ಹೇಳಿದರು. ಪದ್ಮಲತಾಳ ಹತ್ಯೆಯಾಗಿ ೩೯ ವರ್ಷಗಳು ಕಳೆದಿವೆ. ಈ ಬಗ್ಗೆ ತನಿಖೆ ಮಾಡಿದರೆ ಈಗಲೂ ಸತ್ಯ ಹೊರಬರುವ ನಿರೀಕ್ಷೆಯಿದೆ ಎಂದು ಇಂದ್ರಾವತಿ ವಿಶ್ವಾಸ ವ್ಯಕ್ತಪಡಿಸಿದರು.
ಸಿಪಿಐಎಂ ಮುಖಂಡ ಬಿ.ಎಂ.ಭಟ್ ಮೊದಲಾದವರಿದ್ದರು.