ಧರ್ಮಸ್ಥಳ ಪ್ರಕರಣ: ಇಂದು ಶೋಧ ನಡೆದಿಲ್ಲ, ನಾಳೆ ಸಾಧ್ಯತೆ
Thursday, August 7, 2025
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ಇಂದು ನಡೆದಿಲ್ಲ. ಅನಾಮಿಕ ದೂರುದಾರ ಗುರುತಿಸಿದ 12 ಸ್ಥಳದಲ್ಲಿ ಈಗಾಗಲೇ ಶೋಧ ನಡೆದಿದ್ದು, 13ನೇ ಸ್ಥಳದ ಶೋಧ ಇಂದು ನಡೆಯಲಿದೆ ಎನ್ನಲಾಗಿತ್ತು. ಆದರೆ ಇಂದು ಯಾವುದೇ ಶೋಧ ಕಾರ್ಯಾಚರಣೆ ನಡೆದಿಲ್ಲ.
ಸಭೆ..:
ಇಂದು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ತಂಡ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಿದೆ.
ತಂತ್ರಜ್ಞಾನ ಬಳಕೆ..:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲದಡಿ ಮೃತದೇಹದ ಅವಶೇಷಗಳ ಪತ್ತೆ ಹಚ್ಚಲು ತಂತ್ರಜ್ಞಾನ ಬಳಸಲು ಹಾಗೂ ಖಚಿತವಾದರೆ ಮಾತ್ರ ಅಗೆಯುವ ಕಾರ್ಯ ಮುಂದುವರಿಸಲು ವಿಶೇಷ ತನಿಖಾ ಎಸ್‌ಐಟಿ ಚಿಂತನೆ ನಡೆಸಿದೆ ಎನ್ನಲಾಗಿದೆ.