ಕಡಬ ಪಟ್ಟಣ ಪಂಚಾಯತ್: 32 ಅಭ್ಯರ್ಥಿಗಳು ಕಣದಲ್ಲಿ

ಕಡಬ ಪಟ್ಟಣ ಪಂಚಾಯತ್: 32 ಅಭ್ಯರ್ಥಿಗಳು ಕಣದಲ್ಲಿ

ಕಡಬ: ಕಡಬ ಪಟ್ಟಣಪಂಚಾಯಿತಿಗೆ ಆಗಸ್ಟ್ 17 ರಂದು ಪ್ರಥಮ ಬಾರಿ ನಡೆಯಲಿರುವ ಚುನಾವಣೆಗೆ ಗುರುವಾರ ನಾಮಪತ್ರ ಪರಿಶೀಲನೆ ನಡೆದು ಶುಕ್ರವಾರ ನಾಮಪತ್ರ ವಾಪಸ್ ಪ್ರಕ್ರಿಯೆ ನಡೆಯಿತು. ಅಂತಿಮವಾಗಿ 13 ವಾರ್ಡ್‌ಗಳಲ್ಲಿ ನಡೆಯುವ ಚುನಾವಣೆಗೆ ಒಟ್ಟು 32 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಈ ಬಗ್ಗೆ ಚುನಾವಣಾಧಿಕಾರಿ ಲೋಕೋಪಯೋಗಿ ಇಲಾಖೆ ಸುಬ್ರಹ್ಮಣ್ಯ ವಿಶೇಷ ವಿಭಾಗದ ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, "13 ವಾರ್ಡ್‌ಗಳಿಗೆ ಒಟ್ಟು 47 ನಾಮಪತ್ರ ಸಲ್ಲಿಕೆಯಾಗಿತ್ತು. ಈ ಪೈಕಿ 11 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 30 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಾಲ್ವರು ನಾಮಪತ್ರ ವಾಪಸ್ ಪಡೆದು 32 ಜನ ಅಂತಿವಾಗಿ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದಾರೆ" ಎಂದು ಹೇಳಿದರು.

ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ವಾರ್ಡ್ಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗುವುದು. ಒಟ್ಟು 8,334 ಅರ್ಹ ಮತದಾರರಿದ್ದು 4018 ಪುರುಷ ಹಾಗೂ 4318 ಮಹಿಳಾ ಮತದಾರಿದ್ದಾರೆ" ಎಂದು ವಿವರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article