ಬಿಜೆಪಿ ಕಾರ್ಕಳ ವತಿಯಿಂದ ಬೃಹತ್ ವಾಹನ ಜಾಥಾ
ವಾಹನ ಜಾಥಾವನ್ನು ಹಿರಿಯ ಬಿಜೆಪಿ ಮುಖಂಡ ಬೋಳ ಪ್ರಭಾಕರ್ ಕಾಮತ್ ಬಿಜೆಪಿ ಬಾವುಟವನ್ನು ನಿಶಾನೆಯಾಗಿ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಜಾಥಾದಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್, ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ನಗರಾಧ್ಯಕ್ಷ ರವೀಂದ್ರ ಮೊಯಿಲಿ, ಅಲ್ಪಸಂಖ್ಯಾತ ಮೋರ್ಚಾದ ಮುಸ್ತಫಾ ಜಾರ್ಕಳ, ಭರತ್ ಜೈನ್, ಶೀತಲ್ ಜೈನ್, ಕುಕ್ಕುಂದೂರು ಪಂಚಾಯತ್ ಮಾಜಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಥೋನಿ ಡಿಸೋಜಾ ನಕ್ರೆ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸಂತೋಷ ಪೂಜಾರಿ, ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಸಾಲ್ಯಾನ್, ಸದಸ್ಯರಾದ ಆತ್ಮನಂದ, ಸಂತೋಷ ಶೆಟ್ಟಿ, ಬಿಜೆಪಿ ಮುಖಂಡ ಬೋಳ ಶ್ರೀನಿವಾಸ್ ಕಾಮತ್, ಬಿಜೆಪಿ ವಕ್ತಾರ ಹರೀಶ್ ಶೆಣೈ, ಬೋಳ ಜಯರಾಮ್ ಸಾಲ್ಯಾನ್, ಸಾಣೂರ್ ಕರುಣಾಕರ ಪೂಜಾರಿ, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಪ್ರಶಾಂತ್ ಕೋಟ್ಯಾನ್, ಸದಸ್ಯರಾದ ಮಮತಾ, ನೀತಾ ಆಚಾರ್ಯ, ರವೀಂದ್ರ ಕುಕ್ಕುಂದೂರು, ಕಾರ್ಕಳ ಕ್ಷೇತ್ರ ವ್ಯಾಪ್ತಿಯ ಪಂಚಾಯತ್‌ಗಳ ಬಿಜೆಪಿ ಬೆಂಬಲಿತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಕಳ ಸ್ವರಾಜ್ಯ ಮೈದಾನ ಬಳಿಯಿಂದ ಹೊರಟ ವಾಹನ ಜಾಥಾ ಅನಂತಶಯನ, ಗೋಮಾಟಬೆಟ್ಟ, ಆನೆಕೆರೆ, ಕೃಷ್ಣ ಮಂದಿರ ಬೈಪಾಸ್ ಮೂಲಕ ಹಿರಿಯಂಗಡಿ, ಅತ್ತೂರ್ ಕ್ರಾಸ್, ತಾಲೂಕು ಆಫೀಸ್, ಬಂಗ್ಲೆಗುಡ್ಡೆ, ಜೋಡುರಸ್ತೆ ಮುಖಂತರ ಬೈಲೂರ್, ಹಿರಿಯಡ್ಕದಾರಿಯಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು.
ಬೈಲೂರು ಮತ್ತು ಹಿರಿಯಡ್ಕ ಜಂಕ್ಷನ್ ಬಳಿ ಹೆಬ್ರಿ ಹಾಗೂ ಅಜೆಕಾರ್, ಮುನಿಯಲು, ಪಳ್ಳಿ ಕಡೆಯಿಂದ ಬರುವ ಬಿಜೆಪಿ ಕಾರ್ಯಕರ್ತರ ವಾಹನಗಳು ವಾಹನ ಜಾಥಾದೊಂದಿಗೆ ಸೇರಿಕೊಂಡವು.