ಮೂಡುಬಿದಿರೆಯ ಬಸ್ಸಿನಲ್ಲಿ ಕಾಮುಕನಿಂದ ಹೆಣ್ಣು ಮಕ್ಕಳಿಗೆ ಕಿರುಕುಳ: ಸುಮೋಟ ಕೇಸು ದಾಖಲಿಸುವಂತೆ ರಮಿತಾ ಶೈಲೆಂದ್ರ ಆಗ್ರಹ

ಮೂಡುಬಿದಿರೆಯ ಬಸ್ಸಿನಲ್ಲಿ ಕಾಮುಕನಿಂದ ಹೆಣ್ಣು ಮಕ್ಕಳಿಗೆ ಕಿರುಕುಳ: ಸುಮೋಟ ಕೇಸು ದಾಖಲಿಸುವಂತೆ ರಮಿತಾ ಶೈಲೆಂದ್ರ ಆಗ್ರಹ


ಕಾರ್ಕಳ: ಮೂಡುಬಿದರೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ, ಪೊಲೀಸ್ ಇಲಾಖೆ ಮೌನ ವಹಿಸಿದೆ, ಸದ್ರಿ ವ್ಯಕ್ತಿಯ ಮೇಲೆ ಸೋಮೊಟೊ ಕೇಸ್ ದಾಖಲಿಸುವಂತೆ ಕಾರ್ಕಳದ ಸಮಾಜ ಸೇವಕಿ ರಮಿತಾ ಶೈಲೆಂದ್ರ ಪೊಲೀಸ್ ಇಲಾಖೆಯನ್ನು ಅಗ್ರಹಿಸಿದ್ದಾರೆ. 

ವಿಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಂಡು ಬರದ ಕಾರಣ ಗುರುತಿಸಲು ಅಸಾಧ್ಯವಾಗಿರುತ್ತದೆ. ಈ ಬಗ್ಗೆ ಆತನನ್ನು ಠಾಣೆಗೆ ಕರೆಯಿಸಿ ವಿಚಾರಿಸಲಾಗಿದ್ದು, ಆತನಿಗೂ ಸಹ ಸಂತ್ರಸ್ತ ಯುವತಿಯ ಬಗ್ಗೆ ಮಾಹಿತಿ ಇರುವುದಿಲ್ಲ. ಆದುದರಿಂದ ಸಂತ್ರಸ್ತ ಯುವತಿ ಅಥವಾ ಈ ವ್ಯಕ್ತಿಯಿಂದ ತೊಂದರೆಗೋಳಗಾದ ಯಾರಾದರೂ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿದರೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಡುಬಿದಿರೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಹೇಳಿಕೆ ನೀಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದನ್ನು ತೀವ್ರವಾಗಿ ಹಿಂದೂ ಸಮಾಜದ ಮಾತೃ ಶಕ್ತಿ ವಿರೋಧಿಸುತ್ತದೆ.

ಆಕೆ ಯಾರೇ ಆಗಿರಲಿ ಹೆಣ್ಣು ಎಂಬುವಂತಹ ಪರಿಜ್ಞಾನ ನಮಗಿದೆ, ಅವಳಿಗೆ ಕಿರುಕುಳ ನೀಡುವುದು ಕಂಡುಬಂದರೂ ಕೂಡ ನಿಮಗೆ ಸುಮೊಟ ಕೇಸು ದಾಖಲಿಸಲು ಯಾವ ದೂರಿನ ಅಗತ್ಯವಿಲ್ಲವೆಂದು ಭಾವಿಸುತ್ತೇನೆ, ಸಮಾಜದಲ್ಲಿ ಇಂಥ ಅನೈತಿಕತೆ ಎದ್ದು ಕಂಡಾಗ ಸಮಾಜವನ್ನು ಕಾಪಾಡುವಂತಹ ಜವಾಬ್ದಾರಿ ಪೊಲೀಸ್ ಇಲಾಖೆಗೆ ಇರುತ್ತದೆ ಹಾಗಾಗಿ ಇದನ್ನು ತಳ್ಳಿ ಹಾಕದೆ ಸುಮೊಟ ಕೇಸು ದಾಖಲಿಸಬೇಕೆಂದು ತಮ್ಮಲ್ಲಿ ಮಹಿಳೆಯರ ಪರವಾಗಿ ಆಗ್ರಹಿಸಿದ ಅವರು ಜವಾಬ್ದಾರಿ ಯುತವಾಗಿ ನೀವು ನಡೆದುಕೊಳ್ಳದೆ ಇದ್ದಲ್ಲಿ ಮಹಿಳಾ ಆಯೋಗದ ಮುಂದೆ ದೂರನ್ನು ನೀಡುತ್ತೇವೆ ಮತ್ತು ಸುಮೊಟೊ ದೂರನ್ನು ದಾಖಲಿಸದಿದ್ದರೆ ಘಟನೆಯನ್ನು ಖಂಡಿಸಿ ಪ್ರತಿಭಟಿಸಿ  ಮಾತೃಶಕ್ತಿಯ ಸಾಮರ್ಥ್ಯವನ್ನು ತೋರಿಸಬೇಕಾಗಿತ್ತು ಎಂದು ಸಮಾಜ ಸೇವಕಿ ರಮಿತಾ ಶೈಲೆಂದ್ರ ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article