ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಸಲ್ಲಿಸಿರುವ ಪಿಐಎಲ್ ಬಗ್ಗೆ ತನಿಖೆ ನೆಡೆಸಲು ಜಿಲ್ಲಾಧಿಕಾರಿಗೆ ಮನವಿ: ಉಮೇಶ್ ಕಲ್ಲೊಟ್ಟೆ

ಪರಶುರಾಮ ಥೀಮ್ ಪಾರ್ಕ್ ಬಗ್ಗೆ ಸಲ್ಲಿಸಿರುವ ಪಿಐಎಲ್ ಬಗ್ಗೆ ತನಿಖೆ ನೆಡೆಸಲು ಜಿಲ್ಲಾಧಿಕಾರಿಗೆ ಮನವಿ: ಉಮೇಶ್ ಕಲ್ಲೊಟ್ಟೆ


ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ನಲ್ಲಿ ಹೊಸ ಕಂಚಿನ ಪರಶುರಾಮ ಮೂರ್ತಿಯನ್ನು ನಿರ್ಮಿಸಲು ತಮ್ಮ ಸಹಿತ ಬೇರೆ ಇಲಾಖಾ ಮುಖ್ಯಸ್ಥರನ್ನು ಪಕ್ಷಕಾರರನ್ನಾಗಿಸಿ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿರುತ್ತದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಸೂಕ್ತ ತನಿಖೆ ನಡೆಸುವಂತೆ ಸಮಾಜ ಸೇವಕ, ಮಾಹಿತಿ ಹಕ್ಕು ಕಾರ್ಯಕರ್ತಉಮೇಶ್ ಕಲ್ಲೊಟ್ಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಪರಶುರಾಮ ಥೀಮ್ ಪಾರ್ಕ್‌ಗೆ ಹೋಗಲು ಕಾಂಕ್ರೀಟ್ ರಸ್ತೆಗೆ ಬಿಲ್ಲು ಬಿಡುಗಡೆಯಾಗಲು ಬಾಕಿ ಇರುತ್ತದೆ. ಪರಶುರಾಮ ಥೀಮ್ ಪಾರ್ಕ್‌ಗೆ ಹೋಗಲು ಕಾಂಕ್ರೀಟ್ ರಸ್ತೆಗೆ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೇ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸದ ಗುತ್ತಿಗೆದಾರರಿಗೆ ಬಿಲ್ಲು ಬಿಡುಗಡೆಯಾಗದೆ ಬಾಕಿ ಇರುತ್ತದೆ. ಕಾಂಕ್ರೀಟ್ ರಸ್ತೆ ಅಕ್ರಮವಾಗಿ ಹಣ ಬಳಕೆಯಾಗಿರುವ ಬಗ್ಗೆ ಜಿಎಸ್‌ಟಿ ಮತ್ತು ಐಟಿ ಇಲಾಖೆಯಿಂದ ತನಿಖೆಯಾಗಬೇಕು. 

ಹೊಸ ಕಂಚಿನ ಪರಶುರಾಮ ಮೂರ್ತಿಯನ್ನು ನಿರ್ಮಿಸಲು ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮತ್ತು ಸದ್ರಿ ಕಾಂಕ್ರೀಟ್ ರಸ್ತೆಗೆ ಹಣವನ್ನು ಬಿಡುಗಡೆ ಮಾಡಲು ಸಂಬಂಧ ಇರುವ ಬಗ್ಗೆ ತಾವು ಸರಕಾರಕ್ಕೆ ಪತ್ರವನ್ನು ಬರೆದು ಯಾವುದೇ ಹಣವನ್ನು ಬಿಡುಗಡೆ ಮಾಡಬಾರದು. ಇದ್ದು ಪರಶುರಾಮ ಮೂರ್ತಿಗೆ ಸರಕಾರದಿಂದ ಶಿಲ್ಪಿಗೆ ಬಿಡುಗಡೆಯಾಗಿರುವ ಹಣವನ್ನು ವಸೂಲು ಮಾಡಲು ಕ್ರಮವನ್ನು ಕೈಗೊಳ್ಳಬೇಕೇ ಹೊರತು ಪುನಃ ಸರಕಾರದಿಂದ ಹಣ ಬಿಡುಗಡೆ ಮಾಡಿ ಪರಶುರಾಮ ಮೂರ್ತಿಯನ್ನು ನಿರ್ಮಿಸುವುದು ಕಾನೂನು ಬಾಹಿರವಾಗಿರುತ್ತದೆ ಹಾಗೂ ಈ ಬಗ್ಗೆ ತಾವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article