ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ವತಿಯಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ
Saturday, August 16, 2025
ಕುಂದಾಪುರ: ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಇವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ.ಹಿ.ಪ್ರಾ. ಶಾಲೆ ಟಿ.ಟಿ. ರಸ್ತೆ ಕುಂದಾಪುರ, ಇಲ್ಲಿನ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನೆರವೇರಿತು.
‘ಊರ್ಮನಿ ಮಕ್ಳ್ ಓದಿಗೊಂದ್ ಸ್ಫೂರ್ತಿ’ ‘ಮಕ್ಳ್ ತರ್ಲಿ ನಮ್ಮೂರಿಗೊಂದ್ ಕೀರ್ತಿ’ ಎನ್ನುವ ಧ್ಯೇಯದೊಂದಿಗೆ ಸ.ಹಿ.ಪ್ರಾ. ಶಾಲೆ ಟಿ.ಟಿ. ರಸ್ತೆ, ಕುಂದಾಪುರ ಇಲ್ಲಿನ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಜೈ ಕುಂದಾಪ್ರ ಸಂಸ್ಥೆಯ ಸ್ಥಾಪಕಾಧ್ಯಕ್ಷ ಪುಂಡಲೀಕ ಮೊಗವೀರ, ಆದಿತ್ಯ ಕೋಟ, ಜಯರಾಜ್ ಸಾಲಿಯಾನ್ ಪಡುಕೆರೆ, ದಿವ್ಯ ಕುಂದಾಪುರ, ಸೌಮ್ಯ ಹಾಸನ, ಗಣೇಶ್ ಭಟ್, ಸುಧೀರ್ ಕುಂದಾಪುರ ಹಾಗೂ ಬಾಲ ವಿಕಾಸನ ಸಮಿತಿಯ ಅಧ್ಯಕ್ಷೆ ದೀಪಾ ಸುಧೀರ್, ಪುರಸಭೆಯ ಸದಸ್ಯ ಗಣೇಶ್ ಶೇರಿಗಾರ್, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸುಲೋಚನ, ಅಂಗನವಾಡಿ ಶಿಕ್ಷಕಿ ಜ್ಯೋತಿ ಹಾಗೂ ಶ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಅಂಗನವಾಡಿ ಅವರ ವತಿಯಿಂದ ಜೈ ಕುಂದಾಪ್ರ ಸಂಸ್ಥೆಯ ಸೌಮ್ಯ ಹಾಸನ ಅವರನ್ನು ಗೌರವಿಸಿಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಟ್ರಸ್ಟ್ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಯಿತು.

