ಆಳ್ವಾಸ್‌ನಲ್ಲಿ ಟೆಡ್‌ಎಕ್ಸ್ ಟಾಕ್

ಆಳ್ವಾಸ್‌ನಲ್ಲಿ ಟೆಡ್‌ಎಕ್ಸ್ ಟಾಕ್


ಮೂಡುಬಿದಿರೆ: ಚೊಚ್ಚಲ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ ಜ್ಞಾನ, ಅನುಭವ ಹಾಗೂ ನವೀನ ಆಲೋಚನೆಗಳ ಹಂಚಿಕೆಗೆಂದಿರುವ ಅಂತರರಾಷ್ಟ್ರೀಯ ಖ್ಯಾತಿಯ ವೇದಿಕೆ ಟೆಡ್‌ಎಕ್ಸ್ ಎಐಇಟಿ ಕಾರ್ಯಕ್ರಮವನ್ನು ಶನಿವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಶಿಕ್ಷಣವೆಂಬುದು ಕೇವಲ ಪದವಿ ಅಥವಾ ಉದ್ಯೋಗಕ್ಕೆ ಸೀಮಿತವಾಗಬಾರದು. ಅದು ವಿದ್ಯಾರ್ಥಿಯೊಳಗಿನ ಅಸಾಧಾರಣ ಸಾಮರ್ಥ್ಯವನ್ನು ಪೋಷಿಸಿ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿ ಕೆಲಸಮಾಡಬೇಕು. ಆಳ್ವಾಸ್ ಸಂಸ್ಥೆ ಇಂತಹ ಅವಕಾಶಗಳ ಮಹಾಪೂರವನ್ನು ತನ್ನ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಪ್ರತಿಯೊಬ್ಬರಲ್ಲೂ ಅಡಗಿರುವ ಶಕ್ತಿ ಮತ್ತು ಪ್ರತಿಭೆಯನ್ನು ಹೊರತೆಗೆಯುವುದು ನಿಜವಾದ ಶಿಕ್ಷಣದ ಧ್ಯೇಯವಾಗಬೇಕು ಎಂದರು. 

ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಏಳು ಗಣ್ಯ ವ್ಯಕ್ತಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. 10 ವರ್ಷದ ಬಾಲಕಿ, ರಾಷ್ಟ್ರೀಯ ಮಟ್ಟದ ಸ್ಕೇಟ್‌ಬೋರ್ಡ್ ಚಾಂಪಿಯನ್ ಜಾನಕಿ ಆನಂದ, ಲೈಫ್‌ಸ್ಟೈಲ್ ವೈದ್ಯ ಡಾ. ಅಚ್ಯುತನ್ ಈಶ್ವರ್, ನಿವ್ಯಿಯಸ್ ಸೊಲ್ಯೂಷನ್‌ನ ಸಿಇಒ ಮತ್ತು ಸಹ-ಸ್ಥಾಪಕ ಸುಯೋಗ್ ಶೆಟ್ಟಿ, ನಿವೃತ್ತ ಸೇನಾ ಅಧಿಕಾರಿ ಲೆ. ಜನರಲ್ ಎ. ಅರುಣ್, ಸೈ-ಫೈ ಕ್ಷೇತ್ರದ ಸುಫಿಯಾನ್ ಆಲಂ, ಕಲಾವಿದ ಹಾಗೂ ಕಂಟೆಂಟ್ ಕ್ರಿಯೇಟರ್ ಅಭಿಷೇಕ್ ಮಿಶ್ರಾ ಮತ್ತು ಖ್ಯಾತ ಭಾಗವತರು ಹಾಗೂ ಯಕ್ಷಗಾನ ಕಲಾವಿದ ಪಟ್ಲ ಸತೀಶ ಶೆಟ್ಟಿ ಅವರು ತಮ್ಮ ಜೀವನದ ಪ್ರೇರಣಾದಾಯಕ ಕಥನಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಪ್ರಾಂಶುಪಾಲ ಡಾ ಕುರಿಯನ್, ಡಾ.ಪೀಟರ್ ಫೆರ್ನಾಂಡೀಸ್, ಶಿಕ್ಷಣ ತಜ್ಞೆ ರೂಪಾ ಅರುಣ್ ಇದ್ದರು. ಶಾರ್ವರಿ ಶೆಟ್ಟಿ ನಿರೂಪಿಸಿ, ಅನ್ಸಿನ್ ಕುಮಾರ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article