ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮುಂಶಿ ಪ್ರೇಮಚಂದ್‌ರ 145ನೇ ಜಯಂತಿ ಆಚರಣೆ

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮುಂಶಿ ಪ್ರೇಮಚಂದ್‌ರ 145ನೇ ಜಯಂತಿ ಆಚರಣೆ


ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಗ್ರಂಥಾಲಯದ ವತಿಯಿಂದ ಹಿಂದಿ ವಿಭಾಗ, ಹಿಂದಿ ಸಂಘ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆ.2 ರಂದು ಕಾಲೇಜಿನ ಗ್ರಂಥಾಲಯದಲ್ಲಿ ಹಿಂದಿ ಸಾಹಿತ್ಯಲೋಕದ ಮಹಾನ್ ಉಪನ್ಯಾಸಕಾರರಾದ ಮುಂಶಿ ಪ್ರೇಮಚಂದ ಅವರ 145ನೇ ಜನ್ಮ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮಾತನಾಡಿ, ಹಿಂದಿ ಸಾಹಿತ್ಯ ಲೋಕದ ಮಹಾನ್ ಕಥೆಗಾರ, ಲೇಖಕ, ಉಪನ್ಯಾಸಕರಾದ ಪ್ರೇಮಚಂದ್ ಅವರ ಕೊಡುಗೆಯನ್ನು ಸ್ಮರಿಸಿದರು. ವಿದ್ಯಾರ್ಥಿಗಳು ಇವರ ಕೃತಿಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಲು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಪ್ರೇಮಚಂದ್ ಇವರ ಆಯ್ದ ಪುಸ್ತಕಗಳ ಪ್ರದರ್ಶನವನ್ನು ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು. ಪ್ರೇಮಚಂದ್ ಅವರ ಕಥಾ ಸಾಹಿತ್ಯದ ಬಗ್ಗೆ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಸುಜಾತಾ, ರೂಬಿ ಶುಕ್ಲಾ ಹಾಗೂ ಅಮಿತಾ ಶುಕ್ಲಾ ಅವರು ಪ್ರೇಮಚಂದರ ಕಥಾ ಸಾಹಿತ್ಯದ ಬಗ್ಗೆ ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸಿದರು.

ಸಂಸ್ಕೃತ ವಿಭಾಗದ ಅಧ್ಯಕ್ಷ ಪ್ರೊ. ಕುಮಾರ್ ಸುಭ್ರಮಣ್ಯ ಭಟ್ ಅವರು ವಿದ್ಯಾರ್ಥಿ ಕ್ಷೇಮಪಾಲಕರು ಗ್ರಂಥಾಲಯದ ಅರ್ಥ, ಮಹತ್ವ ಹಾಗೂ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮಾಡಿಸಿದರು.

ಗ್ರಂಥಪಾಲಕಿ ಡಾ. ವನಜಾ ಇವರು ಸ್ವಾಗತಿಸಿದರು. ಪ್ರೊ. ನಾಗರತ್ನ ರಾವ್ ಅವರು ಹಿಂದಿ ವಿಷಯದ ಮಹತ್ವ ಹಾಗೂ ಪ್ರೇಮಚಂದರ ಕೊಡುಗೆ ಬಗ್ಗೆ ವಿವರಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಸುಮಾ ಟಿ. ರೋಡನ್ನವಾರ ವಂದಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿನಿ ರೇಯಾನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article