
ಜಿಲ್ಲಾ ಮಟ್ಟದ ‘ಕೃಷ್ಣಮಯ-20025’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
Monday, August 4, 2025
ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ವಸತಿ ಶಾಲೆಯಲ್ಲಿ ಕೃಷ್ಣಮಯ-2025 ಜಿಲ್ಲಾ ಮಟ್ಟದ ಕೃಷ್ಣವೇಶ ಸ್ಪರ್ಧೆಯ ಸಮಾರೋಪ ಸಮಾರಂಭವು ಆಗಸ್ಟ್ 2 ರಂದು ರೇಷ್ಮಾ ಮೆಮೋರಿಯಲ್ ಅಡಿಟೋರಿಯಂನಲ್ಲಿ ನಡೆಯಿತು.
ಬೆಣ್ಣೆ ಕೃಷ್ಣ ಸ್ಪರ್ಧೆಯಲ್ಲಿ ಅನಘ ಎಂ ಶೆಟ್ಟಿ ಪ್ರಥಮ ಸ್ಥಾನ, ಲಿಷಿಕ ನಿತಿನ್ ಕುಮಾರ್ ದ್ವಿತೀಯ ಸ್ಥಾನ, ಘನಿಷ್ಠ ಕೆ. ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಧ್ಯಾನ ಶ್ಲೋಕ ಸ್ಪರ್ಧೆಯಲ್ಲಿ ಅಕ್ಷತಾ ಭಟ್ ಸಿ. ಕುವೆಂಪು ಸೆಂಟೇನರಿ ಸ್ಕೂಲ್ ನಾಲ್ಯಪದವು ಪ್ರಥಮ ಸ್ಥಾನ, ಸ್ವಸ್ತಿ ಚಿದಾನಂದ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮೆರಿಹಿಲ್ ದ್ವಿತೀಯ ಸ್ಥಾನ, ಆರ್ಯನ್ ವಿ.ಪಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡಾಜೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಬಾಲಕೃಷ್ಣ ಸ್ಪರ್ಧೆಯಲ್ಲಿ ಅಹನಾ ಶೆಟ್ಟಿ ಶಕ್ತಿ ಪ್ರೀ ಸ್ಕೂಲ್ ಪ್ರಥಮ ಸ್ಥಾನ, ಆಧ್ಯಾ ಗಾಣಿಗ ಲಿಟ್ಲ್ ವಿಂಗ್ಸ್ ಪ್ರೀ ಸ್ಕೂಲ್ ವಾಮಂಜೂರು ದ್ವಿತೀಯ ಸ್ಥಾನ, ಧನಿಷ್ಕಾ ಎನ್. ದೇವಾಡಿಗ ಶಾರದಾ ವಿದ್ಯಾಲಯ ತೃತೀಯ ಸ್ಥಾನವನ್ನುಪಡೆದಿರುತ್ತಾರೆ.
ದಾಸರ ಕೀರ್ತನೆ ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಪ್ರಥಮ ಸ್ಥಾನ, ಕೆನರಾ ಸಿಬಿಎಸ್‌ಇ ಹೈಸ್ಕೂಲ್ ದ್ವಿತೀಯ ಸ್ಥಾನ, ಶಾರದಾ ವಿದ್ಯಾಲಯ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಗೀತ ಕಂಠಪಾಠ ಅಧ್ಯಾಯ 12 ಸ್ಪರ್ಧೆಯಲ್ಲಿ ದಿವ್ಯ ಶಾರದಾ ವಿದ್ಯಾಲಯ ಪ್ರಥಮ ಸ್ಥಾನ ಪ್ರಂಶು ನಾವಡ ಶಾರದಾ ವಿದ್ಯಾಲಯ ದ್ವಿತೀಯ ಸ್ಥಾನ, ಶ್ರೀಯ ಆರ್. ಶೆಟ್ಟಿ, ಶಕ್ತಿ ರೆಸಿಡೆನ್ಷಿಯಲ್ ಸ್ಕೂಲ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಗೀತ ಕಂಠಪಾಠ ಅಧ್ಯಾಯ 15 ಸ್ಪರ್ಧೆಯಲ್ಲಿ ಸ್ತುತಿ ಯಾಜಿ ಶಾರದಾ ವಿದ್ಯಾಲಯ ಪ್ರಥಮ ಸ್ಥಾನ, ಆದರ್ಶ್ ಕೃಷ್ಣ ಶಾರದಾ ವಿದ್ಯಾಲಯ ದ್ವಿತೀಯ ಸ್ಥಾನ, ಶ್ರೀನಿಧಿ ಡಿ. ದೇವಾಡಿಗ ಶಾರದಾ ಸೆಂಟ್ರಲ್ ಸ್ಕೂಲ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕೃಷ್ಣ ಬಾಲ ಲೀಲೆ ಚಿತ್ರಕಲಾ ಸ್ಪರ್ಧೆಯಲ್ಲಿ ವಿಕ್ರಂ ಶೆಣೈ ಸೈಂಟ್ ಎಲೋಸಿಸ್ ಹೈಸ್ಕೂಲ್ ಪ್ರಥಮ ಸ್ಥಾನ, ಆತ್ಮಿಕ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ದ್ವಿತೀಯ ಸ್ಥಾನ, ಹೃತ್ವಿಕ್ ಎನ್. ಸೈಂಟ್ ಎಲೋಶಿಸ್ ಹೈಸ್ಕೂಲ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಯಶೋಧ ಕೃಷ್ಣ ಸ್ಪರ್ಧೆಯಲ್ಲಿ ನವ್ಯ ಮತ್ತು ಅನೈರಾ ಎ. ಶೆಟ್ಟಿ ಪ್ರಥಮ ಸ್ಥಾನ, ಮಧುಮಿತ ಮತ್ತು ಆಕಾಂಕ್ಷ ದ್ವಿತೀಯ ಸ್ಥಾನ, ರಶ್ಮಿತಾ ಮತ್ತು ರೆಯಾಂಶ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಗೋಪಿಕಾ ಕೃಷ್ಣ ಸ್ಪರ್ಧೆಯಲ್ಲಿ ಶಾರದಾ ವಿದ್ಯಾಲಯ ಕೊಡಿಯಲ್ ಬೈಲ್ ಪ್ರಥಮ ಸ್ಥಾನ, ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಿಮಂತೂರು ದ್ವಿತೀಯ ಸ್ಥಾನ, ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ .
ಕುಣಿತ ಭಜನೆ ಸ್ಪರ್ಧೆಯಲ್ಲಿ ಕೆನರಾ ಹೈಸ್ಕೂಲ್ ಸಿಬಿಎಸ್‌ಇ ಮಂಗಳೂರು ಪ್ರಥಮ ಸ್ಥಾನ, ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ದ್ವಿತೀಯ ಸ್ಥಾನ, ಚಿನ್ಮಯ ಹೈಸ್ಕೂಲ್ ಕದ್ರಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿಜೇತರಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಜಾಯ್ ಆಲುಕಾಸ್ ಮಂಗಳೂರು ಇಲ್ಲಿಯ ಚೀಫ್ ಮ್ಯಾನೇಜರ್ ಹರೀಶ್ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ವಿಜೇತರಾದ ಎಲ್ಲರಿಗೂ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.