2010ರಲ್ಲಿ ಮಹಿಳೆಯ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸುವಂತೆ ಆಗ್ರಹ
2010ರಲ್ಲಿ ಧರ್ಮಸ್ಥಳದ ಶರಾವತಿ ಲಾಡ್ಜ್‌ನಲ್ಲಿ ಮಹಿಳೆಯ ಶವ ಸಿಕ್ಕಿದ್ದು, ಈ ಪ್ರಕರಣದ ಕುರಿತು ಸಿಪಿಐ ಮಟ್ಟದ ಅಧಿಕಾರಿಗಳ ತನಿಖೆ ಮಾಡಬೇಕು. ಆದರೆ ಇಲ್ಲಿ ಎಎಸ್‌ಐ ತನಿಖೆ ಮಾಡಿದ್ದಾರೆ. ಶರಾವತಿ ಲಾಡ್ಜ್‌ನಲ್ಲಿ ಸಿಗೋ ಮಹಿಳೆಯ ಶವ ಅಪರಿಚಿತ ಎಂದು ಹೇಳಿದ್ದು, ಅದು ಹೇಗೆ ಅಪರಿಚಿತ ವಶವ ಆಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಲಾಡ್ಜ್‌ನಲ್ಲಿ ರೂಂ ನೀಡುವಾಗ ಯಾವುದೇ ಗುರುತಿನ ಚೀಟಿ ಪಡೆಯದೆ ಒಳಗಡೆ ಬಿಡುತ್ತಾರಾ? ಎಂದು ಪ್ರಶ್ನಿಸಿದರು.
ಮಹಿಳೆಯ ಕೊಲೆಯಾಗಿದ್ದು 6ನೇ ತಾರೀಕು ಅದೇ ದಿನ ಆ ಮಹಿಳೆಯ ಶವವನ್ನು ದಫನ ಮಾಡಿದ್ದಾರೆ. ಕನಿಷ್ಠ 15 ದಿನಗಳ ವರೆಗೆ ಶವಾಗಾರದಲ್ಲಿಡಬೇಕು ಅನೋ ನಿಯಮವಿದೆ. ಆದರೆ ಯಾಕೆ ಅವತ್ತೇ ಆ ಮಹಿಳೆಯ ಶವವನ್ನು ಹೂತು ಹಾಕಿದರು ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಯುಡಿಆರ್ ಬಾಡಿ ಸುಡುವ ಹಕ್ಕು ಪೊಲೀಸರಿಗೆ ಇಲ್ಲ ಆದರೆ ಪೊಲೀಸರು ಇಲ್ಲಿ ದಹನ ಮಾಡುವ ಹುನ್ನಾರವನ್ನು ನಡೆಸಿಯೇ ಕೃತ್ಯವೆಸಗಿದ್ದಾರೆ. ಕೊಲೆಯಾದ ಶವವನ್ನು ಅಕ್ರಮವಾಗಿ ವಿಲೇವಾರಿ ಮಾಡುತ್ತಾರೆ ಎಂದಾದರೆ ಇಲ್ಲಿ ಸಾಕ್ಷಿ ನಾಶ ಮಾಡುವ ಹುನ್ನಾರ ನಡೆದಿದೆ ಎಂದು ಆರೂಪಿಸಿದ ಅವರು ಧರ್ಮಸ್ಥಳ ಗ್ರಾಂ. ಪಂಚಾಯತ್‌ನವರು ಶವ ಹೂತ ಜಾಗವನ್ನು ತೋರಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ಅಧಿಕಾರಿಗಳನ್ನು ತನಿಖೆಗೆ ಕರೆಸಬೇಕು. ಶರಾವತಿ ಲಾಡ್ಜ್‌ನಲ್ಲಿ ಆ ಸಮಯದಲ್ಲಿದ್ದ ರೂಂ ಬಾಯ್ ಹಾಗೂ ಮ್ಯಾನೇಜರ್‌ನನ್ನು ವಿಚಾರಣೆ ಮಾಡಬೇಕು. ರಾಜ್ಯ ಸರಕಾರ ಮತ್ತು ಎಸ್‌ಐಟಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ತನಿಖೆಗೆ ಎಸ್‌ಐಟಿಗೆ ಹೆಚ್ಚಿನ ಅಧಿಕಾರ ಕೊಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆಗೆ ಪ್ರಾರಂಭ ಹಂತದಲ್ಲಿಯೇ ತಡೆಯೋಡ್ಡಬೇಕು ಎಂಬ ಪ್ರಯತ್ನ ನಡೆಯುತ್ತಿದ್ದು, ಪ್ರಕರಣವನ್ನು ತಿರುಚುವ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಸುಳ್ಳು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅನಾಮಿಕ ವ್ಯಕ್ತಿಯ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಇದ್ದಾರೆ ಎಂದು ಹೇಳುತ್ತಿದ್ದು, ಆತನ ಹಿಂದೆ ಅಲ್ಲ ನಾವು ಆತನ ಜೊತೆಗೆ ನಾವಿದ್ದೇವೆ. ನಾವು ಮಾತ್ರವಲ್ಲ ನೂರಾರು ಹೋರಾಟಗಾರರು ಇದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹೇಳಿದರು.
ನಮಗೆ ಈ ವಿಚಾರದಲ್ಲಿ ಸುಳ್ಳು ಪ್ರಚಾರ ಮಾಡಲು ಫಂಡಿಂಗ್ ಆಗಿದೆ ಎಂದು ಆರೋಪಗಳು ಕೇಳಿ ಬರುತ್ತಿದ್ದು, ಫಂಡಿಂಗ್ ಆಗಿದ್ದಲ್ಲಿ ಅದರ ಬಗ್ಗೆ ತನಿಖೆ ಮಾಡಲಿ ಎಂದು ಸವಾಲು ಹಾಕಿದ ಅವರು ಅನಾಮಿಕ ತೋರಿಸಿದ ಜಾಗದಲ್ಲಿ ಶವ ಖಂಡಿತಾ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.
ಧರ್ಮಸ್ಥಳ ದೇವಸ್ಥಾನದ ಬಗ್ಗೆ ನಾವು ಅಪಪ್ರಚಾರ ಮಾಡಿದರೆ ನಮ್ಮನ್ನು ಬೇಕಾದರೆ ತನಿಖೆ ಮಾಡಿ. ನಾವು ದೇವಸ್ಥಾನಕ್ಕೆ ಅಪಪ್ರಚಾರ ಮಾಡಿದ್ದರೆ ನಮ್ಮನ್ನು ಜೈಲಿಗೆ ಹಾಕಿ ಎಂದ ಅವರು ಪ್ರಶ್ನೆ ಕೇಳುವುದು ಷಡ್ಯಂತ್ರನಾ... ನಾವು ಯಾವುದೇ ತನಿಖೆಗೆ ಸಿದ್ದರಿದ್ದೇವೆ ಎಂದರು.
ನಾವು ಹಣ ತೆಗೆದುಕೊಂಡಿದ್ದೇವೆ ಎಂದು ಮತ್ತೊಂದು ಷಡ್ಯಂತ್ರದ ಆರೋಪ ಮಾಡಲಾಗುತ್ತಿದೆ. ಆರೋಪ ಮಾಡುವವರು ಜಾರಿ ನಿರ್ದೇಶನಾಲಯದ ಕಣ್ಣು ತಪ್ಪಿಸಿ ಹಣ ತೆಗೆದುಕೊಳ್ಳಲು ಸಾಧ್ಯನಾ? ಎಂದು ಯೋಚಿಸಬೇಕು ಎಂದು ಪ್ರಶ್ನಿಸಿದ ಅವರು ಎಸ್‌ಐಟಿ ನೋಟಿಸ್ ಕೊಟ್ರೆ ನಾವು ವಿಚಾರಣೆಗೆ ತಯಾರಿದ್ದೇವೆ ಎಂದು ಹೇಳಿದರು.