ಮುರಗೋಳಿ ಫ್ರೆಂಡ್ಸ್ ನಿಂದ ಮೊಸರು ಕುಡಿಕೆ: ಸಮಾಜ ಸೇವಕರಿಗೆ ಸನ್ಮಾನ, ಬಡ ಕುಟುಂಬಕ್ಕೆ ಅಕ್ಕಿ ವಿತರಣೆ
ಸತೀಶ್ ಆಚಾರ್ಯ ಮುರಗೋಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸನ್ಮಾನ:
ಮುರಗೋಳಿ ಹಾಗೂ ಪೇರಲ್ದಕಟ್ಟ ಪರಿಸರದಲ್ಲಿ ಸುಮಾರು ವರ್ಷಗಳಿಂದ ಯಾವುದೇ ಗೌರವಧನ ಪಡೆಯದೆ ಪಂಚಾಯತ್ ಕುಡಿಯುವ ನೀರಿನ ಪಂಪನ್ನು ಅಪರೇಟ್ ಮಾಡುತ್ತಿರುವ ಅನಿಲ್ ಕುಮಾರ್ ನ್ನು, ಹಲವಾರು ವರ್ಷಗಳಿಂದ ಅಮ್ಮನೊಟ್ಟು ಮತ್ತು ಮುರಗೋಳಿ ಪರಿಸರದಲ್ಲಿ ದಾರಿದೀಪವನ್ನು ಕ್ಲಪ್ತ ಸಮಯದಲ್ಲಿ ಹಾಕಿ ಹಾಗೂ ಬೆಳಿಗ್ಗೆ ಆರಿಸಿ ಸಮಾಜಕ್ಕೆ ಮಾದರಿಯಾದ ಶಂಕರ ಪೂಜಾರಿ ಹಾಗೂ ಆಗಸ್ಟಿನ್ ರೋಡ್ರಿಗಸ್ ಅವರನ್ನು ಈ ಸಂದಭ೯ದಲ್ಲಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭೂ ನ್ಯಾಯ ಮಂಡಳಿ ಸದಸ್ಯರು ಹಾಗೂ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಹಾಗೂ ಮುರಗೋಳಿ ಫ್ರೆಂಡ್ಸ್ ಅವರು ಆರ್ಥಿಕವಾಗಿ ಹಿಂದುಳಿದಿರುವ ಬಡ ಐದು ಕುಟುಂಬಗಳಿಗೆ ತಲಾ 10 ಕೆಜಿಯಂತೆ 20 ಕೆ.ಜಿ. ಅಕ್ಕಿಯನ್ನು ವಿತರಿಸದರು.
ಪಂಚಾಯತ್ ಸದಸ್ಯೆ ಕುಸುಮ, ರಮೇಶ್ ಟೈಲರ್, ಸಂದೀಪ್ ಆಚಾರ್ಯ, ಯತೀಶ್ ಕುಮಾರ್, ಉಮೇಶ್ ಶೆಟ್ಟಿ, ಶಂಕರ ದೇವಾಡಿಗ, ಸತೀಶ್ ಶೆಟ್ಟಿ,ರತ್ನಾಕರ ಹೆಗಡೆ ಅವರು ಭಾಗವಹಿಸಿದ್ದರು.
ಮುರಗೋಳಿ ಫ್ರೆಂಡ್ಸ್ ನ ಸದಸ್ಯರಾದ ಸುರೇಂದ್ರ, ಪ್ರವೀಣ, ಸಂದೀಪ್, ಸುರೇಶ, ಮಂಜುನಾಥ ವಸಂತ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸುಮಾರು ನೂರಕ್ಕೂ ಹೆಚ್ಚು ಸಾರ್ವಜನಿಕರು ಹಲವಾರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.