ಆ.9ರಂದು ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

ಆ.9ರಂದು ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಮಂಗಳೂರಿನ ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 79ನೇ ಸ್ವಾತ್ರಂತ್ರ್ಯೋತ್ಸವದ ಅಂಗವಾಗಿ ವೀರಮರಣ ಹೊಂದಿದ ಸ್ವಾತಂತ್ರ ಸೇನಾನಿಗಳ ಸ್ಮರಣಾರ್ಥ ಸಾವಿರ ದಾನಿಗಳ ಬೃಹತ್ ರಕ್ತದಾನ ಶಿಬಿರ ಆ.9ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್‌ನ ಮಂಗಳೂರು ಘಟಕದ ಅಧ್ಯಕ್ಷ ಜೀಶನ್ ಆಲಿ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಸಾಮಾಜಿಕ ಸಂಸ್ಥೆಯಾದ ಬಿ-ಹ್ಯೂಮನ್ ಕಳೆದ 10 ವರ್ಷಗಳಿಂದ ಜಾತಿ ಮತ ಭೇದವಿಲ್ಲದೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಇದರ ಆಶ್ರಯದಲ್ಲಿ ಸುಮಾರು 6 ಆಸ್ಪತ್ರೆಗಳ  ಸಹಯೋಗದೊಂದಿಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ರಕ್ತದಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. 

ಸಾರ್ವಜನಿಕರಿಗೆ ರಕ್ತದಾನದ ಅರಿವು ಮೂಡಿಸಲು ಹಾಗೂ ರಕ್ತದಾನಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ರಕ್ತದಾನ ಮಾಡಿದ ಮೂರು ಮಂದಿ ಸದಸ್ಯರಿಗೆ ಮಧ್ಯಾಹ್ನ 2.30ಕ್ಕೆ ಲಕ್ಕಿ ಡ್ರಾ ಮೂಲಕ ಮೂರು ಬೆಲೆ ಬಾಳುವ ಮೊಬೈಲ್ ಫೋನ್‌ಗಳನ್ನು ನೀಡಲಾಗುವುದು ಎಂದರು. 

ಉದ್ಘಾಟನೆ: ಬೆಳಗ್ಗೆ 8.30ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್, ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ದರ್ಶನ್. ಎಚ್.ವಿ., ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಇತರ ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೀಶನ್ ಆಲಿ ತಿಳಿಸಿದರು. 

ಬಿ-ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ಚೇರ್ ಮ್ಯಾನ್ ಎಂ. ಮೊಹಮ್ಮದ್ ಷರೀಫ್ ಬೋಳಾರ , ಬಿ-ಹೂಮನ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್ , ಟ್ರಸ್ಟಿ ಇಮ್ರಾನ್ ಹಸನ್, ಗೌರವ ಸಲಹೆಗಾರರಾದ ಅಬ್ಬಾಸ್ ಅಹ್ಮದ್ ಉಚ್ಚಿಲ್ ಮತ್ತು ಇಮ್ಮಿಯಾಜ್ ಜಿ. ಅಹ್ಮದ್, ಶಾಹುಲ್ ಹಮೀದ್ ಉಜಿರೆ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article