ಧರ್ಮಸ್ಥಳಕ್ಕೆ ಸಾವಿರಾರು ಭಕ್ತರ ಜಾಥಾ

ಧರ್ಮಸ್ಥಳಕ್ಕೆ ಸಾವಿರಾರು ಭಕ್ತರ ಜಾಥಾ


ಮಂಗಳೂರು: ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಸುಮಾರು 400ಕ್ಕೂ ಅಧಿಕ ವಾಹನಗಳೊಂದಿಗೆ ಸಾವಿಕ್ಕೂ ಅಧಿಕ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಸಂಜೆ ಜಾಥಾ ಮೂಲಕ ಆಗಮಿಸಿದರು.


ಶಾಸಕ ಎಸ್.ಆರ್. ವಿಶ್ವನಾಥ್ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಮೂಲಕ ನಾಡಿನ ಕೋಟ್ಯಾಂತರ ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಇದ್ದಾರೆ ಎಂಬ ಸಂದೇಶವನ್ನು ನೀಡಿದರು. 


ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನಾಧಿಕಾಲದಿಂದಲೂ ಸನಾತನ ಹಿಂದೂ ಧರ್ಮ ಇರುವಂತಹ ದೇಶ ನಮ್ಮದು. ನಮ್ಮ ನಂಬಿಕೆಗಳನ್ನು, ಶ್ರದ್ಧಾಕೇಂದ್ರಗಳನ್ನು ಪೂಜಿಸುವವರು. ರಾಜ್ಯದಲ್ಲಿ ಧರ್ಮಸ್ಥಳ ಪ್ರಸಿದ್ಧ ಹಾಗೂ ಶಕ್ತಿಶಾಲಿಯಾದಂತಹ ಮಂಜುನಾಥ ಸ್ವಾಮಿಯ ಸ್ಥಾನವಾಗಿದೆ. ಅದರೊಂದಿಗೆ ಡಿ. ವೀರೇಂದ್ರ ಹೆಗ್ಗಡೆ ಅವರು ಕೂಡ ರಾಜ್ಯಾಧ್ಯಂತ ಸೇವೆಯನ್ನು ಮಾಡುವ ಮೂಲಕ ಎಲ್ಲರ ಮನೆ ಮಾತಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಇಂದು ಅಪಪ್ರಚಾರ ಮಾಡುವ ವ್ಯವಸ್ಥಿತವಾದ ಸುಂಚು ನಡೆಯುತ್ತಿದೆ ಎಂದು ಗೊತ್ತಾಗಿದೆ.


ಇಂದು ನಾವು ಯಲಹಂಕ ವಿಧಾನಸಭಾ ಕ್ಷೇತ್ರದಿಂದ ೪೦೦ಕ್ಕೂ ಹೆಚ್ಚು ಕಾರುಗಳ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದೇವೆ. ಸೌಜನ್ಯ ಪ್ರಕರಣದ ತನಿಖೆಗೆ ನಾವು ಎಂದೂ ಅಡ್ಡಿ ಮಾಡಿಲ್ಲ. ಪ್ರಕರಣವನ್ನು ಎಸ್‌ಐಟಿ ಮಾಡಲಿ ಎಂದು ನಾವು ಕೂಡ ಹೇಳಿದ್ದೆವು. ಆದರೆ ಇಲ್ಲ ಸೌಜನ್ಯ ಪ್ರಕರಣವನ್ನು ಬಿಟ್ಟು ಯಾರೋ ಅನಾಮದೇಯ ಬಂದು 100ಕ್ಕೂ ಹೆಚ್ಚು ಹೆಣಗಳನ್ನು ಹೂತಿದ್ದೇನೆ ಎಂದು ಹೇಳಿ ಅಪಪ್ರಚಾರ ಮಾಡಿದ್ದಾನೆ ಎಂದು ತಿಳಿದು ನಾವು ಇಲ್ಲಿಗೆ ಬಂದಿದ್ದೇವೆ. ತನಿಖೆಯ ಬಗ್ಗೆ ನಾವು ಮಾತನಾಡುವುದಿಲ್ಲ, ಆದರೆ ಧರ್ಮಸ್ಥಳದ ಅಪಪ್ರಚಾರದ ಬಗ್ಗೆ ನಾವು ಮಾತನಾಡುತ್ತೇವೆ, ಕಾಂಗ್ರೆಸ್‌ನವರು ಕೂಡ ಮಾತನಾಡಬೇಕು. ಎಲ್ಲರೂ ಮಾತನಾಡಬೇಕು ಎಂದು ಹೇಳಿದರು.

ಧರ್ಮಸ್ಥಳ ಯಾವುದೋ ಒಂದು ಪಕ್ಷಕ್ಕೆ ಸೇರಿದ ಕ್ಷೇತ್ರವಲ್ಲ. ನಾವು ಯೂಟೂಬ್‌ನಲ್ಲಿ ನೋಡಿದ್ದೇವೆ. ಸೌಜನ್ಯನನ್ನು ಬಿಟ್ಟರೆ ದೇವ ಮಾನವರ ಮೇಲೆ ಇವರು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಜೆಸಿಬಿಗಳನ್ನು ಧರ್ಮಸ್ಥಳಕ್ಕೆ ನುಗ್ಗಿಸುತ್ತೇವೆ ಎಂದು ಹೇಳುತ್ತಾರೆ ನಿಮಗೆ ಧರ್ಮಸ್ಥಳಕ್ಕೆ ಜೆಸಿಬಿಯನ್ನು ನುಗ್ಗಿಸುವ ಧಮ್ಮು ಇದಿಯ ಎಂದು ಸವಾಲು ಹಾಕಿದ ಅವರು ಯಾವನೋ ಬಂದು ಯಾರದೋ ಮನೆಯಲ್ಲಿ ಕೂತು ಯೂಟುಬ್‌ನಲ್ಲಿ ಮಾತನಾಡುವುದಲ್ಲ. ನೇರವಾಗಿ ಸ್ಥಳಕ್ಕೆ ಬರಬೇಕು. ಎಸ್‌ಐಟಿ ಎನಿಖೆ ನಡೆಯುತ್ತಿದೆಯಲ್ಲ. ಎಸ್‌ಐಟಿ ಮುಂದೆ ಬಂದು ದೂರು ನೀಡಬೇಕು. ಹಿಂದೆ ಕೂತು ಮಾತನಾಡುವುದಲ್ಲ ಎಂದರು.

ಬಿಜೆಪಿ ಎಂದಿಗೂ ಹಿಂದುತ್ವ ಮತ್ತು ಹಿಂದೂ ಧಾರ್ಮಿಕ ಕೇಂದ್ರ, ಹಿಂದೂ ಭಾವನೆಗಳ ಬಗ್ಗೆ ಒಂದು ಹೆಜ್ಜೆ ಮುಂದೆ ಇರುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರಸುವುದಿಲ್ಲ ಎಂದು ಹೇಳಿದ ಅವರು ಈ ಅಪಪ್ರಚಾರದ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜನರು ರೊಚ್ಚಿಗೆದ್ದಿದ್ದಾರೆ. ಇನ್ನು ಬಡುಗೆ ತೆಗೆದು ಅಪಪ್ರಚಾರ ಮಾಡುವವರಿಗೆ ಹೊಡೆಯುತ್ತಾರೆ. ಇದೆಲ್ಲ ರಾಜಕಾರಣಿಗಳು ಕೂಡ ಅಂತವರಿಗೆ ಬೆಂಬಲ ನೀಡಿದರೆ ರಾಜಕಾರಣಿಗಳಿಗೂ ರಸ್ತೆಯಲ್ಲಿ ಹೊಡೆಯುತ್ತಾರೆ ಎಂದರು.

ಇಂದು ಬಿಜೆಪಿ ರಾಜ್ಯಾಧ್ಯಕ್ಷೆ ಧರ್ಮಸ್ಥಳಕ್ಕೆ:

ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜಾಥಾ ಮೂಲಕ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article