
ಜೈಲಿಗೆ ವಸ್ತು ತಡೆಯುವುದಕ್ಕೆ ತಡೆ: ತಡೆಬೇಲಿ
ಕೆಲವು ತಿಂಗಳ ಹಿಂದೆ ಜೈಲು ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ತೆರಳುತ್ತಿದ್ದ ಅನಾಮಿಕರು ಜೈಲಿನೊಳಗೆ ಶಂಕಿತ ಮಾದಕ ವಸ್ತು ಪೊಟ್ಟಣ ಎಸೆಯುತ್ತಿದ್ದುದು ಕಾರಿನ ಕೆಮರಾದಲ್ಲಿ ಸೆರೆಯಾಗಿ ಭಾರೀ ಚರ್ಚೆಗೀಡಾಗಿತ್ತು. ಇತ್ತೀಚೆಗೆ ಜೈಲಿಗೆ ಗೃಹ ಸಚಿವರು ಭೇಟಿ ಕೊಟ್ಟ ಸಂದರ್ಭದಲ್ಲೂ ಭದ್ರತೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಜೈಲು ಮುಂಭಾಗದ ರಸ್ತೆಯಲ್ಲಿ ಈ ಹಿಂದೆ ಅಹಿತಕರ ಘಟನೆ ನಡೆದ ಜಾಗದಲ್ಲಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜೈಲು ಪ್ರವೇಶ ಭಾಗದಲ್ಲೂ ಹೆಚ್ಚಿನ ಭದ್ರತೆ ಹೆಚ್ಚಿಸಲಾಗಿದೆ. ಜೈಲಿನ ಸುತ್ತಲಿನಲ್ಲಿ ಪ್ರಸ್ತುತ 18 ಅಡಿ ಎತ್ತರದ ತಡೆಗೋಡೆ ಇದೆ. ಒಳ ಭಾಗದಿಂದ ತಪ್ಪಿಸಿಕೊಳ್ಳಲು ಇದರಿಂದ ಸಾಧ್ಯವಿಲ್ಲ. ಆದರೆ, ಹೊರಭಾಗದಿಂದ ಯಾವುದೇ ವಸ್ತುಗಳು ಒಳಗೆ ರವಾನೆಯಾಗಬಾರದು ಎಂದು ಈ ಗೋಡೆಯ ಮೇಲೆ ಪೋಲ್ಗಳನ್ನು ಅಳವಡಿಸಿ ಸುಮಾರು 250 ಅಡಿ ವಿಸ್ತೀರ್ಣದಲ್ಲಿ 6 ಅಡಿ ಎತ್ತರದ ತಡೆ ಬೇಲಿ ಅಳವಡಿಕೆಯಾಗಲಿದೆ. ಇದಕ್ಕಾಗಿ ಸುಮಾರು 58 ಲಕ್ಷ ರೂ. ವೆಚ್ಚವಾಗಲಿದೆ. ಪಿಡಬ್ಲ್ಯುಡಿ ಮೂಲಕ ಕಾಮಗಾರಿ ನಡೆಯಲಿದೆ. ಭದ್ರತೆಗೋಸ್ಕರ ಮುಖ್ಯ ಗೋಡೆಗೆ ನೆಟ್ ಅಳವಡಿಸಲಾಗುವುದು. ನಿಷೇಧಿತ ವಸ್ತುಗಳನ್ನು ಜೈಲೊಳಗೆ ಎಸೆಯುವುದನ್ನು ತಪ್ಪಿಸಲು ತಡೆಯಲು ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮಂಗಳೂರು ಜೈಲು ಅಧೀಕ್ಷಕರು ಶರಣಬಸಪ್ಪ ಹೇಳಿದ್ದಾರೆ.