ಬೆಳಗಾವಿಯಲ್ಲಿ ಎಳೆ ಮಕ್ಕಳ ಜೀವದ ಜತೆ ಮುತಾಲಿಕ್ ಸಹಚರರ ಚೆಲ್ಲಾಟ, ಸರಕಾರ ಉತ್ತರಿಸಲಿ
Tuesday, August 5, 2025
ಮಂಗಳೂರು: ಬೆಳಗಾವಿಯ ಸರಕಾರಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಮುಸ್ಲಿಮ್ ಎಂಬ ಕಾರಣಕ್ಕಾಗಿ, ಷಡ್ಯಂತ್ರದಿಂದ ಅವರನ್ನು ವರ್ಗಾವಣೆ ಮಾಡಲು, ಅವರ ಮೇಲೆ ಆರೋಪ ಹೇರಲು, ಶೈಕ್ಷಣಿಕ ಸಂಸ್ಥೆಯ ನೀರಿನಲ್ಲಿ ವಿಷ ಪ್ರಾಶನ ಗೊಳಿಸಿ, ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಅಸ್ವಸ್ತತೆ ಗೊಳ್ಳಲು ಕಾರಣರಾದ ದುಷ್ಕರ್ಮಿಗಳು ಮತ್ತು ಪ್ರಮೋದ್ ಮುತಾಲಿಕ್ ಸಹಚರರುಗಳು ಎಳೆ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವುದು, ಇವರ ಮನಸ್ಥಿತಿ ಹಿಟ್ಲರ್ ಮನಸ್ಥಿತಿಗೆ ಏನು ಕಡಿಮೆ ಇಲ್ಲ ಎಂದಾಯಿತು!
ಪ್ರಮೋದ್ ಮುತಾಲಿಕ್ ಮತ್ತು ಅವನ ಸಹಚರರ ಆತಿರೇಕತೆ ಒಂದಲ್ಲ, ಎರಡಲ್ಲ. ಈ ಹಿಂದಿನ, ತಾಲೂಕು ಕಚೇರಿ ಆವರಣದಲ್ಲಿನ ವಿದೇಶಿ ದ್ವಜ ಹಾರಾಟ, ಗುಂಪು ಹಲ್ಲೆ, ಅನ್ಯ ಧಾರ್ಮಿಕ ಕೇಂದ್ರಗಳ ವಿರುದ್ಧದ ಅತಿರೇಕತೆ ದಾಳಿ ಇತ್ಯಾದಿಗಳು ಅಧಿಕವಾಗುತ್ತಲೇ ಇದೆ, ಸರಕಾರ ಮುತಾಲಿಕ್ ಅಂತವರನ್ನು ಪೋಷಿಸುತ್ತಲೇ ಇದೆಯೇ? ಸರಕಾರ ಉತ್ತರಿಸಲಿ ಎಂದು ಮನಪಾ ಮೇಯರ್ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.