ದೌರ್ಜನ್ಯ ಮುಂದುವರಿದರೆ ಬೋಂದೆಲ್ ಚಲೋ: ಬಿ.ಕೆ. ಇಮ್ತಿಯಾಜ್

ದೌರ್ಜನ್ಯ ಮುಂದುವರಿದರೆ ಬೋಂದೆಲ್ ಚಲೋ: ಬಿ.ಕೆ. ಇಮ್ತಿಯಾಜ್


ಮಂಗಳೂರು: ಬಡ ಮಹಿಳಾ ವ್ಯಾಪಾರಿಯ ಮೇಲೆ ಮಾನಸಿಕ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ, ಅನಗತ್ಯ ಕಿರುಕುಳ ನೀಡಿ ಬಡ ಬೀದಿ ವ್ಯಾಪಾರಿಗೆ ಕಿರುಕುಳ ಮುಂದುವರಿದರೆ ಬೋಂದೆಲ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದರು.

ಅವರು ಇಂದು ಮಹಿಳಾ ಬೀದಿ ಬದಿ ವ್ಯಾಪಾರಿ ಶಾಲಿನಿ ಅವರಿಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆ ಯತ್ನಕ್ಕೆ ಕಾರಣರಾಗಿರುವವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿ, ಅನಧಿಕೃತ ಆಟೋ ನಿಲ್ದಾಣದ ಪರ ನಿಂತು ಬೀದಿ ವ್ಯಾಪಾರಿಗೆ ಬೆದರಿಕೆ ಹಾಕಿದ ಪಾಲಿಕೆ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ನಗರದ ಮಿನಿ ವಿಧಾನ ಸೌಧದ ಎದುರು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಮತ್ತು ಜನವಾದಿ ಮಹಿಳಾ ಸಂಘಟನೆ ಮಂಗಳೂರು ನಗರ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಅನಧಿಕೃತ ರಿಕ್ಷಾ ಪಾರ್ಕಿಗೆ ವಿಧಾನ ಪರಿಷತ್ ಸದಸ್ಯರ ಅನುದಾನ ದುರ್ಬಳಕೆ ಮಾಡಲಾಗಿದೆ, ಬಡ ಮಹಿಳೆಗೆ ಕಳೆದ ಒಂದು ತಿಂಗಳಿನಿಂದ ಹಿಂಸೆ ನೀಡಲಾಗುತ್ತಿದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ದುರ್ಬಲ ಸೆಕ್ಷನ್ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಮಾತನಾಡಿದರು.

ಜನವಾದಿ ಮಹಿಳಾ ಸಂಘಟನೆಯ ಅಸುಂತ ಡಿಸೋಜಾ, ಯೋಗಿತಾ ಸುವರ್ಣ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮುಜಾಫರ್ ಅಹ್ಮದ್, ಸಿಕಂದರ್ ಬೇಗ್, ಹಂಝ, ನೌಷಾದ್ ಕಣ್ಣೂರು, ರಫೀಕ್ ಪಾಂಡೇಶ್ವರ, ರಾಮಚಂದ್ರ ರಾವ್, ಗಂಗಮ್ಮ, ಎಂ.ಎನ್. ಶಿವಪ್ಪ, ಪ್ರದೀಪ್, ವಿಜಯ್ ಜೈನ್, ಅಬ್ದುಲ್ ಖಾದರ್ ವಾಮಂಜೂರ್, ಅನ್ಸರ್ ಬಜಾಲ್, ಚಂದ್ರಹಾಸ್ ಪಡೀಲ್, ಜಮಾಲ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article