ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ಆಟಿದ ಐಸಿರ ಕಾರ್ಯಕ್ರಮ

ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ಆಟಿದ ಐಸಿರ ಕಾರ್ಯಕ್ರಮ


ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ವತಿಯಿಂದ ನಗರದ ಜೆಪ್ಪುವಿನ ಪಾಲೇಮಾರ್ ಗಾರ್ಡನ್‌ನಲ್ಲಿ ಆಟಿದ ಐಸಿರ ಕಾರ್ಯಕ್ರಮವನ್ನು ತುಳುನಾಡಿನ ಹಿಂದಿನ ಶೈಲಿಯಂತೆ ಕಡೆಯುವ ಕಲ್ಲಿನಲ್ಲಿ ಮಸಾಲೆ ಅರೆಯುವ ಮೂಲಕ ಗಣ್ಯರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಾನಪದ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ತುಳುನಾಡಿನಲ್ಲಿ ಜುಲೈ-ಆಗಸ್ಟ್‌ನಲ್ಲಿ ಆಟಿ ಕಳಂಜದ್ದೇ ಸುದ್ದಿ. ಮನೆ ಮನೆಯ ರೋಗ-ರುಜಿನಗಳನ್ನು ದೂರ ಮಾಡಲೆಂದೇ ಆಟಿ ಕಳಂಜ ಬರುವನೆಂಬ ನಮ್ಮ ಹಿರಿಯರ ನಂಬಿಕೆ ಯಾವುದೇ ಮೂಢನಂಬಿಕೆಯಲ್ಲ. ಪ್ರತಿಯೊಂದು ನಂಬಿಕೆಯ ಹಿಂದೆಯೂ ವೈಜ್ಞಾನಿಕ ಹಿನ್ನಲೆ ಇರುವುದೇ ಈ ಮಣ್ಣಿನ ಸಂಸ್ಕೃತಿಯ ಶ್ರೇಷ್ಠತೆ ಎಂದು ಹೇಳಿದರು.


ನಮ್ಮ ಹಿರಿಯರು ಆಟಿಯ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟು, ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸಿಕೊಂಡು ಹೇಗೆ ಬದುಕಿದರು ಎಂಬುದನ್ನು ಅರಿಯುವುದೇ ಈ ಕಾರ್ಯಕ್ರಮದ ಉದ್ದೇಶ. ಕಾರ್ಯಕ್ರಮಕ್ಕೆ ಸ್ಥಳಾವಕಾಶ ಒದಗಿಸಿ ಸಂಪೂರ್ಣ ರೀತಿಯಲ್ಲಿ ಸಹಕಾರ ನೀಡಿ ನಮ್ಮೊಂದಿಗಿರುವ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ಅವರಿಗೆ ಅನಂತ ಕೋಟಿ ಧನ್ಯವಾದಗಳು. ಕಾರ್ಯಕ್ರಮದ ಯಶಸ್ಸಿಗೆ ಶ್ರಮ ವಹಿಸಿದ ಮಂಡಲದ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಸಹಿತ ಪ್ರತಿಯೊಬ್ಬರಿಗೂ ವಿಶೇಷ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ತುಳುನಾಡ ಜನಪದ ಕ್ರೀಡೆಗಳಾದ ಕೋಳಿ ಅಂಕ, ತೆಂಗಿನ ಕಾಯಿ ಕಟ್ಟುವುದು, ಮುಂತಾದ ಗ್ರಾಮೀಣ ಸೊಗಡಿನ ಕ್ರೀಡೆಗಳು ಇದ್ದರೆ, ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಂಡಲದ ಮಹಿಳಾ ಮೋರ್ಚಾದವರು ಬಿಜೆಪಿ ಪ್ರಮುಖರು, ಕಾರ್ಯಕರ್ತರು, ತುಳುನಾಡಿನ ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಿದರು. ಅಲ್ಲದೇ ಹುಲಿವೇಷ ನೃತ್ಯವು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತುಂಬಿತು. ಮಧ್ಯಾಹ್ನದ ವೇಳೆಗೆ ತುಳುನಾಡಿನ ಆಹಾರ ಪದ್ಧತಿಯ 134 ಬಗೆಯ ತಿನಿಸುಗಳು ಆಟಿದ ಐಸಿರದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಸಿದ್ದವಾಗಿತ್ತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಯೋಗ ಶಿಕ್ಷಕಿ ಲೀಲಾ ಕೃಷ್ಣ, ವಿಹಿಂಪ ನಾಯಕ ಹೆಚ್.ಕೆ ಪುರುಷೋತ್ತಮ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಮಂಜುಳಾ ರಾವ್, ನಂದನ್ ಮಲ್ಯ, ಮೋನಪ್ಪ ಭಂಡಾರಿ, ಭಾಸ್ಕರ ಚಂದ್ರ ಶೆಟ್ಟಿ, ಅಶ್ವಿತ್ ಕೊಟ್ಟಾರಿ, ರಾಕೇಶ್ ರೈ, ದಿವಾಕರ್ ಪಾಂಡೇಶ್ವರ, ರವಿಶಂಕರ್ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ವಿಜಯ್ ಕುಮಾರ್ ಶೆಟ್ಟಿ, ಭಾನುಮತಿ, ರೇವತಿ, ಪೂರ್ಣಿಮಾ ರಾವ್, ನಿತಿನ್ ಕುಮಾರ್, ನಾರಾಯಣ ಗಟ್ಟಿ, ಸೇರಿದಂತೆ ಮಂಡಲದ ಪ್ರಮುಖರು, ಪದಾಧಿಕಾರಿಗಳು, ವಿವಿಧ ಮೋರ್ಚಾ, ಪ್ರಕೋಷ್ಟಗಳ, ಪ್ರಮುಖರು, ಕಾರ್ಯಕರ್ತರು ಸಹಿತ ಅನೇಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article