ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ
Friday, August 8, 2025
ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳಜ್ಯೋತಿ ಜಂಕ್ಷನ್ ಬಳಿ ಆಟೋ ರಿಕ್ಷಾದಲ್ಲಿ ಗುರುವಾರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ವಾಮಂಜೂರು ನಿವಾಸಿ ಬದ್ರುದ್ದೀನ್ (35) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ 2 ಕೆಜಿ ತೂಕದ ಗಾಂಜಾ ಮತ್ತು 20 ಸಾವಿರ ರೂ. ನಗದು, 1 ಮೊಬೈಲ್ ಫೋನ್, 1 ಆಟೊ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕರಾದ ಗವಿರಾಜು. ಆರ್.ಪಿ., ಎಸ್‌ಐ ಅರುಣ್ ಕುಮಾರ್ ಡಿ, ಎಚ್.ಸಿ.ಗಳಾದ ಕಮಲಾಕ್ಷ, ಶಶಿಧರ್, ಶಂಕ್ರಪ್ಪ ಮತ್ತು ಪಿಸಿಗಳಾದ ಸಿಕಂದರ್, ಬೀರೇಂದ್ರ, ಪ್ರದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.