ಆರ್ಥಿಕ ಸಮಸ್ಯೆಯಿಂದ ಯಾರ ಶಿಕ್ಷಣವೂ ನಿಲ್ಲಬಾರದು: ನಾರಾಯಣ ನಾಯ್ಕ್
ಅವರು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿದ್ಯಾರ್ಥಿವೇತನ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ಯಾವುದಾದರೂ ಒಂದು ವಿದ್ಯಾರ್ಥಿವೇತನ ಪಡೆಯಲು ಪ್ರಯತ್ನಿಸಬೇಕು, ಆ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ರ್ಯಾಗಿಂಗ್ ತಡೆ ಜಾಗೃತಿ ಬಗ್ಗೆ ಕೂಡಾ ಮಾಹಿತಿ ನೀಡಲಾಯಿತು. ಯುಜಿಸಿಗೆ ರ್ಯಾಗಿಂಗ್ ತಡೆ ಮುಚ್ಚಳಿಕೆ ಸಲ್ಲಿಸುವ ಬಗ್ಗೆ ಕಾರ್ಯಗಾರವನ್ನು ರ್ಯಾಗಿಂಗ್ ತಡೆ ಸಮಿತಿಯ ಸಂಯೋಜಕಿ ಶುಭಾ ಕೆ.ಹೆಚ್. ನಡೆಸಿಕೊಟ್ಟರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ, ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಬೋಧಕ ಸಂಯೋಜಕರಾದ ನಸೀಮಾ ಬೇಗಂ, ಅರುಣಕುಮಾರಿ, ರಘುಪತಿ, ಡಾ. ಅಪರ್ಣ ಆಳ್ವ ಮತ್ತಿತರ ಬೋಧಕರು ಉಪಸ್ಥಿತರಿದ್ದರು. ಪ್ರಥಮ ಪದವಿಯ ಸುಮಾರು ೫೨೫ ವಿದ್ಯಾರ್ಥಿಗಳು ಹಾಜರಿದ್ದರು.
