ಆರ್ಥಿಕ ಸಮಸ್ಯೆಯಿಂದ ಯಾರ ಶಿಕ್ಷಣವೂ ನಿಲ್ಲಬಾರದು: ನಾರಾಯಣ ನಾಯ್ಕ್

ಆರ್ಥಿಕ ಸಮಸ್ಯೆಯಿಂದ ಯಾರ ಶಿಕ್ಷಣವೂ ನಿಲ್ಲಬಾರದು: ನಾರಾಯಣ ನಾಯ್ಕ್


ಮಂಗಳೂರು: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಹಲವಾರು ಸರ್ಕಾರೇತರ ಸಂಸ್ಥೆಗಳಿಂದ ವಿವಿಧ ಬಗೆಯ ವಿದ್ಯಾರ್ಥಿವೇತನಗಳು ಲಭ್ಯವಿದೆ. ಅವುಗಳ ಬಗ್ಗೆ ತಿಳಿದುಕೊಂಡು ಸೂಕ್ತ ಸಮಯದಲ್ಲಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿವೇತನಗಳ ಸೌಲಭ್ಯ ಸದುಪಯೋಗ ಪಡಿಸಿಕೊಂಡರೆ ಯಾರೂ ಕೂಡಾ ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವ ಸಂದರ್ಭ ಬರಲಾರದು ಎಂದು ನಿವೃತ್ತ ಶಿಕ್ಷಕ ನಾರಾಯಣ ನಾಯ್ಕ್ ಹೇಳಿದರು. 

ಅವರು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿದ್ಯಾರ್ಥಿವೇತನ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ರಾಜ್ಯ ವಿದ್ಯಾರ್ಥಿವೇತನ ಹಾಗೂ ಕೇಂದ್ರ ವಿದ್ಯಾರ್ಥಿವೇತನ ಪೋರ್ಟಲ್‌ಗಳ ಮೂಲಕ ಲಭ್ಯವಿರುವ ವಿವಿಧ ವಿದ್ಯಾರ್ಥಿವೇತನಗಳು, ಸರ್ಕಾರೇತರ ಸಂಘ ಸಂಸ್ಥೆಗಳ ವಿದ್ಯಾರ್ಥಿವೇತನ, ಅವುಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ ಇತ್ಯಾದಿಗಳ ಬಗ್ಗೆ ಅವರು ಸವಿವರ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಮಾತನಾಡಿ, ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ಯಾವುದಾದರೂ ಒಂದು ವಿದ್ಯಾರ್ಥಿವೇತನ ಪಡೆಯಲು ಪ್ರಯತ್ನಿಸಬೇಕು, ಆ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ರ‍್ಯಾಗಿಂಗ್ ತಡೆ ಜಾಗೃತಿ ಬಗ್ಗೆ ಕೂಡಾ ಮಾಹಿತಿ ನೀಡಲಾಯಿತು. ಯುಜಿಸಿಗೆ ರ‍್ಯಾಗಿಂಗ್ ತಡೆ ಮುಚ್ಚಳಿಕೆ ಸಲ್ಲಿಸುವ ಬಗ್ಗೆ ಕಾರ್ಯಗಾರವನ್ನು ರ‍್ಯಾಗಿಂಗ್ ತಡೆ ಸಮಿತಿಯ ಸಂಯೋಜಕಿ ಶುಭಾ ಕೆ.ಹೆಚ್. ನಡೆಸಿಕೊಟ್ಟರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್, ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ, ವಿವಿಧ ವಿದ್ಯಾರ್ಥಿವೇತನ ಯೋಜನೆಗಳ ಬೋಧಕ ಸಂಯೋಜಕರಾದ ನಸೀಮಾ ಬೇಗಂ, ಅರುಣಕುಮಾರಿ, ರಘುಪತಿ, ಡಾ. ಅಪರ್ಣ ಆಳ್ವ ಮತ್ತಿತರ ಬೋಧಕರು ಉಪಸ್ಥಿತರಿದ್ದರು. ಪ್ರಥಮ ಪದವಿಯ ಸುಮಾರು ೫೨೫ ವಿದ್ಯಾರ್ಥಿಗಳು ಹಾಜರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article