
ವಸಂತ್ ಗಿಳಿಯಾರ್ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್ ಖಂಡನೆ
ತಮ್ಮದೇ ತೀರ್ಪುಗಳನ್ನು ನೀಡುತ್ತಿದ್ದಾರೆ. ತನಿಖೆ ಆದೇಶಿಸಿ 2 ವಾರಗಳ ಕಾಲ ನಿದ್ರೆಯಲ್ಲಿದ್ದ ಬಿಜೆಪಿ ಈಗ ಎಚ್ಚರಗೊಂಡು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪಗಳಲ್ಲಿ ತೊಡಗಿದೆ.
ಕೆಲ ದಿನಗಳಿಂದ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂಬ ಹೇಳಿಕೆಗಳು ಬರುತ್ತಿವೆ. ಐಎಎಸ್ ಅಧಿಕಾರಿ ಆಗಿದ್ದಾಗ ಗಣಿ ಹಗರಣದಲ್ಲಿ ತನಗೆ (ಕಾನೂನು ಬಾಹಿರವಾಗಿ) ಸಹಕರಿಸಿಲ್ಲ ಎಂದು ಶಾಸಕ ಜನಾರ್ಧನ ರೆಡ್ಡಿ ಸಂಸದರ ಕುರಿತಾಗಿ ಆರೋಪ ಮಾಡಲು ಕಾರಣವಾಗಿದೆ. ಜತಗೆ ವಸಂತ ಗಿಳಿಯಾರ್ ಎಂಬ ಮೇಧಾವಿ ಸೆಂಥಿಲ್ ಅವರನ್ನು ಕಿಂಗ್ ಪಿನ್ ಎಂದು ಕರೆದಿದ್ದಾನೆ. ಚಕ್ರವರ್ತಿ ಸೂಲಿಬೆಲೆ ಕಾಂಗ್ರೆಸ್ ಪಕ್ಷವನ್ನು ನಿಂದಿಸಿ ಅಪಾಯಕಾರಿ ಎಂದು ಜರೆದಿದ್ದಾರೆ.
ಅನೇಕರ ಬೇಡಿಕೆಗೆ ಸ್ಪಂದಿಸಿ ಸತ್ಯ ಹೊರಬರಲಿ ಎಂದು ಕಾಂಗ್ರೆಸ್ ಸರಕಾರ ಎಸ್ಐಟಿ ರಚಿಸಿದೆ. ಹೆಗ್ಗಡೆಯವರೂ ಸ್ವಾಗತಿಸಿದ್ದಾರೆ. ಒಂದೊಂದೇ ಸತ್ಯ ತನಿಖೆಯಿಂದ ಹೊರ ಬರುತ್ತಿದೆ. ಸತ್ಯ ಹೊರಬರುವಲ್ಲಿ ಕಾಂಗ್ರೆಸ್ ತೊಡಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇವರದ್ದು ಡ್ರಾಮ ಕಂಪನಿ. ಇದರಿಂದಾಗಿ ಪುಂಗಿ ದಾಸರುಗಳನ್ನು ಚೂಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಗೂಬೆ ಕೂರಿಸುವ ಕೆಲಸ ಪ್ರಾರಂಭಿಸಿದ್ದಾರೆ. ಇದು ಖಂಡನೀಯ. ಸೆಂಥಿಲ್ ಅವರನ್ನು ಕೇಳಲಾಗಿ “ನನಗೂ ಈ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನನ್ನು ಯಾಕೆ ಇದಕ್ಕೆ ಜೋಡಿಸುತ್ತಿದ್ದಾರೆ” ಎಂದು ತಿಳಿಯಪಡಿಸಿದ್ದಾರೆ.
ವಸಂತ್ ಗಿಳಿಯಾರ್, ಚಕ್ರವರ್ತಿ ಸೂಲಿಬೆಲೆ, ಜನಾರ್ಧನ ರೆಡ್ಡಿ ಇವರು ಸೆಂಥಿಲ್ ಹಾಗೂ ಕಾಂಗ್ರೆಸ್ ಕುರಿತಾಗಿ ನೀಡಿರುವ ಹೇಳಿಕೆಗಳನ್ನು ದ.ಕ.ಜಿಲ್ಲಾ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ಇವರಲ್ಲಿ ಪುರಾವೆಗಳು ಇದ್ದಲ್ಲಿ ಎಸ್ಐಟಿಗೆ ನೀಡಲಿ, ತನಿಖೆ ನಡೆಯಲಿ. ಈ ಹೇಳಿಕೆದಾರರನ್ನೂ ಎಸ್ಐಟಿ ತನಿಖೆಗೆ ಒಳಪಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಆಗ್ರಹಿಸುತ್ತದೆ. ಈ ವಿಚಾರದಲ್ಲಿ ರಾಜಕೀಯ ಎಳೆದು ತರದೆ ತನಿಖೆಗೆ ಸಹಕರಿಸಲಿ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.