
ಡಾ. ಸಿಂಧು ಕಲಾ ಮೇಲಾಯುಧಂ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ
Monday, August 11, 2025
ಮಂಗಳೂರು: ಅಖಿಲ ಭಾರತ ಅರಿವಳಿಕೆ ಶಾಸ್ತ್ರ ಸಂಘದ ಬಳ್ಳಾರಿ ಘಟಕದವರು ಪ್ರಾಯೋಜಿಸಿದ ‘ಟ್ರೈನಿ ಟ್ಯಾಲೆಂಟ್’ ಎಂಬ ಸ್ಪರ್ಧೆಯಲ್ಲಿ ಡಾ. ಸಿಂಧುಕಲಾ ಮೇಲಾಯುಧಂ ಅವರು ಮೂರನೇ ಸ್ಥಾನವನ್ನು ಗಳಿಸಿದ್ದಾರೆ.
ಈ ಸ್ಪರ್ಧೆಯು ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಅರಿವಳಿಕೆ ಶಾಸ್ತ್ರ ಸಂಘದ 39ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ನಡೆಯಿತು.
ಡಾ. ಸಿಂಧುಕಲಾ ಮೇಲಾಯುಧಂ ಅವರು ಕೆ.ಎಸ್. ಹೆಗಡೆ ವಿಶ್ವ ವೈದ್ಯಕೀಯ ವಿಶ್ವವಿದ್ಯಾಲಯದ ಅರಿವಳಿಕೆ ಹಾಗೂ ತೀವ್ರ ನಿಗಾ ಶಾಸ್ತ್ರ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿನಿ.
ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಬೋಧನಾ ಕೌಶಲ್ಯವನ್ನು ಕಂಡು ಹಿಡಿಯುವುದಕ್ಕಾಗಿ ಇದನ್ನು ವಾರ್ಷಿಕವಾಗಿ ಆಯೋಜಿಸಲಾಗುತ್ತದೆ. ಕರ್ನಾಟಕದ ಸುಮಾರು 56 ವೈದ್ಯಕೀಯ ವಿದ್ಯಾಲಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು.