ವಿದ್ಯಾರ್ಥಿಯ ಚಿಕಿತ್ಸೆಗೆ ನೆರವಾಗುವಿರಾ?
Monday, August 18, 2025
ಮಂಗಳೂರು: ಅತಿಯಾದ ವೇಗದ ವಾಹನ ಚಾಲನೆ ಅಮಾಯಕರ ಬದುಕಿಗೆ ಕಂಟಕವಾಗುತ್ತಿದೆ. ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವ ಸ್ಥಿತಿಗೆ ತಲುಪುವ ಘಟನೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಡೆದ ಅಪಘಾತ ಪ್ರಕರಣವೊಂದರಲ್ಲಿ ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡು ಕಳೆದ ೨೧ ದಿನಗಳಿಂದ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಬಿ.ಟೆಕ್ ಕಲಿಯುತ್ತಿರುವ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಕಿರಣ್ ನಾಯಕ್ ಎಂಬಾತನಿಗೆ ಜು.29ರಂದು ಆಟೋರಿಕ್ಷಾವೊಂದು ಗುದ್ದಿದ ಪರಿಣಾಮ ಆತನ ತಲೆಗೆ ಗಂಭೀರ ಗಾಯವಾಗಿ ಕಳೆದ 21 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದು ಕೆಎಂಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮನೆಯ ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ, ಬಡ ಕುಟುಂಬ ಆತನ ಚಿಕಿತ್ಸಾ ವೆಚ್ಚ ಭರಿಸಲು ಹರಸಾಹಸ ಪಡುತ್ತಿದ್ದು, ಸಹೃದಯಿಗಳು ನೆರವಾಗಬೇಕಿದೆ. ಮಗನ ಚಿಕಿತ್ಸೆಗಾಗಿ ನೆರವಾಗುವಂತೆ ಕಿರಣ್ ಅವರ ತಾಯಿ ಸುಷ್ಮಾ ನಾಯಕ್ ಅವರು ಮನವಿ ಮಾಡಿದ್ದಾರೆ.
ಹೀಗೆ ನೆರವಾಗಿ:
ನೆರವು ನೀಡುವ ದಾನಿಗಳು ಸುಷ್ಮಾ ನಾಯಕ್ ಅವರ ಕೆನರಾ ಬ್ಯಾಂಕ್ ಖಾತೆ ಪಳ್ಳಿ, ಖಾತೆ ಸಂಖ್ಯೆ 01942200046960, ಐಎಫ್ಎಸ್ಸಿ ಸಂಖ್ಯೆ ಸಿಎನ್ಆರ್ಬಿ 0010194 ಮೂಲಕ ಪಾವತಿಸಬಹುದು. ಹೆಚ್ಚಿನ ಮಾಹಿತಿಗೆ 9632561047 ಸಂಖ್ಯೆಯನ್ನು ಸಂಪರ್ಕಿಸಬಹುದು.