ಖಾಸಗಿ ಚಾನೆಲ್ ವಿರುದ್ಧ ಪ್ರಕರಣ ದಾಖಲು

ಖಾಸಗಿ ಚಾನೆಲ್ ವಿರುದ್ಧ ಪ್ರಕರಣ ದಾಖಲು


ಉಳ್ಳಾಲ: ತಲಪಾಡಿಯಲ್ಲಿ ಶನಿವಾರ ಎರಡು ಕಾರುಗಳಿಗೆ ತಾಗಿದ ವಿಚಾರದಲ್ಲಿ ನಡೆದಿರುವ ಹೊಡೆದಾಟದ ಬಗ್ಗೆ ಜಾಲತಾಣದಲ್ಲಿ, ಯ್ಯೂಟೂಬ್‌ನಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ದುಷ್ಕರ್ಮಿಗಳ ಹಲ್ಲೆ ತಲೆ ಬರಹದಲ್ಲಿ ಸುದ್ದಿ ಪ್ರಸಾರ ಮಾಡಿದ ಖಾಸಗಿ ಚಾನೆಲ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಚಾನೆಲ್ ವರದಿಗಾರ ಓರ್ವ ಯುವಕ ಹಾಗೂ ಮಹಿಳೆಯನ್ನು ಸಂದರ್ಶನ ಮಾಡಿ ತಲಪಾಡಿಯಲ್ಲಿ ಕುಟುಂಬದ ಮೇಲೆ ಹಲ್ಲೆ ತಲೆಬರಹದಡಿ ಸುದ್ದಿ ಪ್ರಸಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಈ ಚಾನೆಲ್ ವಿರುದ್ಧ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article