ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚದಿಂದ ಕೈಮಗ್ಗ ದಿನಾಚರಣೆ
Thursday, August 7, 2025
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಮಹಿಳಾ ಮೋರ್ಚದ ವತಿಯಿಂದ ಕೈಮಗ್ಗ ದಿನದ ಪ್ರಯುಕ್ತ ನಗರದಲ್ಲಿರುವ ಖಾದಿ ಗ್ರಾಮೋಧ್ಯೋಗ ಭವನ ಕೈಮಗ್ಗ ಮಾರಾಟ ಮಳಿಗೆಗೆ ತೆರಳಿ ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಡಾ. ಮಂಜುಳ ಅನಿಲ್ ರಾವ್ ನೇತೃತ್ವದಲ್ಲಿ ಕೈಮಗ್ಗದ ಬಟ್ಟೆ ಕೊಳ್ಳುವುದರ ಮೂಲಕ ಆಚರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಯುವ ಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಬಬಿತ ರವೀಂದ್ರ, ಸುಮ ಶೆಟ್ಟಿ, ಭರತ್ ರಾಜ್, ಮೀರ ಕರ್ಕೆರ, ವಜ್ರಾಕ್ಷಿ ಶೆಟ್ಟಿ, ವಿಜಯ್ ಗಡಿಯಾರ್ ಉಪಸ್ಥಿತರಿದ್ದರು.