ಮಂಗಳೂರು ವಿ.ವಿಯ ಭೌತಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಸಂತ ಫಿಲೋಮಿನಾ ಕಾಲೇಜಿನ ಡಾ. ಚಂದ್ರಶೇಖರ್ ಕೆ. ಆಯ್ಕೆ

ಮಂಗಳೂರು ವಿ.ವಿಯ ಭೌತಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಸಂತ ಫಿಲೋಮಿನಾ ಕಾಲೇಜಿನ ಡಾ. ಚಂದ್ರಶೇಖರ್ ಕೆ. ಆಯ್ಕೆ


ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಮಂಗಳೂರು ವಿಶ್ವದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಭೌತಶಾಸ್ತ್ರ ಅಧ್ಯಾಪಕರ ಸಂಘ (Association of Physics Teachers of Mangalore University)ದ ಅಧ್ಯಕ್ಷರಾಗಿ ಪುತ್ತೂರು ಸಂತ ಫಿಲೋಮಿನ (ಸಾಯತ್ತ) ಕಾಲೇಜಿನ  ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಕೆ. ಅವರು ಆಯ್ಕೆಯಾಗಿದ್ದಾರೆ. 

ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.

`Studies on Concentration of  Radionuclides and Trace elements in some Selected Medicinal Plants' ಎನ್ನುವ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಇವರ ಹಲವು ವಿಜ್ಞಾನ ಲೇಖನಗಳು Elsevier, Springer, Oxford University Press  ಮೊದಲಾದ ಪ್ರಕಾಶನ ಸಂಸ್ಥೆಗಳ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಇವರ ಹಲವು ಲೇಖನಗಳ ಸಾರಗಳು   scopus, web of science, google scholar  ಮುಂತಾದ ಡೇಟಾಬೇಸ್‌ಗಳಲ್ಲಿ ದಾಖಲಾಗಿದ್ದು, Springer  ನಿಯತಕಾಲಿಕೆಗಳ ಪರಿವೀಕ್ಷಕರಾಗಿ ವಿಜ್ಞಾನ ಪ್ರಬಂಧಗಳ ಪರಾಮರ್ಶನ ಕಾರ್ಯವನ್ನು ಸಹ ಇವರು ನಡೆಸುತ್ತಿದ್ದಾರೆ. ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯ ಕಾರ್ಯಕ್ರಮ ಅಧಿಕಾರಿಯಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article