ಎಸ್‌ಐಟಿ ತನಿಖೆಗೆ ಅಭಯಚಂದ್ರ ಜೈನ್ ಆಕ್ರೋಶ
Wednesday, August 20, 2025
ಮಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಅಭಯಚಂದ್ರ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸದೆ ತನಿಖೆ ನಡೆಸುವುದಕ್ಕೆ ವಿರೋಧವಿದೆ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹೇಶ್ ಶೆಟ್ಟಿ ತಿಮರೋಡಿಯನ್ನ ಬಂಧಿಸುವುದಕ್ಕೆ ನಿಮ್ಮಿಂದ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಅನಾಮಿಕ ವ್ಯಕ್ತಿಯ ಮಂಪರು ಪರೀಕ್ಷೆ ಆಗದೆ ತಿಮರೋಡಿ ಬಂಧನವಾಗದೆ ತನಿಖೆ ನಡೆದರೆ ನನ್ನ ವಿರೋಧವಿದೆ. ಇನ್ನು ಮುಂದೆ ಅನಾಮಿಕನನ್ನು ಧರ್ಮಸ್ಥಳ ದ್ವಾರ ದಾಟಿ ದೇವಸ್ಥಾನದ ವಠಾರಕ್ಕೆ ಬರಲು ನಾವು ಬಿಡುವುದಿಲ್ಲ. ಮತ್ತೆ ಬಾಹುಬಲಿ ಬೆಟ್ಟಕ್ಕೆ ಬಂದರೆ ನಾನು ಮುಂದೆ ನಿಲ್ಲುತ್ತೇನೆ ಎಂದರು.
ಮುಂದಿನ ತನಿಖೆ ಏನಿದ್ದರೂ ಮಂಪರು ಪರೀಕ್ಷೆ ನಂತರ, ತಿಮರೋಡಿಯನ್ನು ಬಂಧಿಸಿದ ನಂತರವೇ ನಡೆಯಬೇಕು. ತಿಮರೋಡಿಯನ್ನು ಬಂಧಿಸುವುದು ಸರ್ಕಾರಕ್ಕೆ ಕಷ್ಟದ ಕೆಲಸ ಅಲ್ಲ. ರಾಜ್ಯ ಸರ್ಕಾರ ಏನು ಮಾಡುತ್ತದೆ ನೋಡೋಣ ಎಂದು ಹೇಳಿದರು.