ವಳಚ್ಚಿಲ್ ಎಕ್ಸ್ಪರ್ಟ್ ಕಾಲೇಜು: ವಿದ್ಯಾರ್ಥಿ ಸಂಸತ್ ಉದ್ಘಾಟನೆ
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು, ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕರ್ನಲ್ ನಿತಿನ್ ಭಿಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಸ್ಥೆಯ ಮಾಹಿತಿ ತಂತ್ರಜ್ಙಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್, ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ. ಹೆಗ್ಡೆ, ಉಪಪ್ರಾಂಶುಪಾಲ(ಶೈಕ್ಷಣಿಕ)ಸುಬ್ರಹ್ಮಣ್ಯ ಉಡುಪ, ಕಾರ್ಯಕ್ರಮ ನಿರ್ದೇಶಕ ಸುರೇಶ್ ಎಡನಾಡು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅದಿತಿ ರಾವ್ ಮತ್ತು ಧ್ಯಾನ್ ಅರ್. ಸ್ವಾಗತಿಸಿ, ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಅಮೀನ್ ವಂದಿಸಿದರು.
ಪದಾಧಿಕಾರಿಗಳು: ಮೊಹಮ್ಮದ್ ಅಮೀನ್(ಅಧ್ಯಕ್ಷ), ಉಜ್ವಲ್ ಶಿವಾನಂದ್(ಉಪಾಧ್ಯಕ್ಷ), ಭವಿಷ್ ಬೆನಕ ಕೆ.ಎಸ್.(ಕಾರ್ಯದರ್ಶಿ), ಎಚ್.ಕೆ. ಭವ್ಯತಾ ಪೊನ್ನಪ್ಪ (ಕಾರ್ಯದರ್ಶಿ), ಗೌತಮ್ ಜಿ., ಲೇಖನ ಕೆ., ಸೂರಜ್ ಆತ್ರೇಯ ಪಿ.ಎಸ್., ಎನ್. ಕವನ್, ರಣ್ವೀರ್ ರಾಣಾ, ನಂದನ್ ಜಿ. ಪಾಟೀಲ್, ವಾಸುದೇವ ಪಿ.ಟಿ., ನವ್ಯ ಎಂ. ಗೌಡ, ವೀರ ಅರುಣ್ ಕುಮಾರ್, ತೆಕ್ಕಲಕೋಟೆ ಸಾನಿಕಾ. (ಸದಸ್ಯರುಗಳು)