ಆರೋಗ್ಯ ಸರಿ ಇಲ್ಲ, ಬೆದರಿಕೆ ಇದೆ ರಕ್ಷಣೆ ನೀಡಿ: ಸುಜಾತ ಭಟ್
ನಿನ್ನೆಯಷ್ಟೇ ಖಾಸಗಿ ಯುಟ್ಯೂಬ್ ನಲ್ಲಿ ಸಂದರ್ಶನದ ವೇಳೆ ‘ನನಗೆ ಅನನ್ಯಾ ಭಟ್ ಎಂಬ ಪುತ್ರಿಯೇ ಸಂಪೂರ್ಣ ಪ್ರಕರಣವೇ ಸುಳ್ಳು ಎಂದಿದ್ದ ಸುಜಾತ ಭಟ್ ನಂತರ ನನಗೆ ಮಗಳಿದ್ದಾಳೆ ಎಂದು ಉಲ್ಟಾ ಹೊಡೆದಿದ್ದರು.
ಇದೀಗ ಸುಜಾತ ಭಟ್ ನನಗೆ ಜೀವ ಬೆದರಿಕೆಯಿದೆ, ಮನೆಯ ಬಳಿ ಮಾಧ್ಯಮದವರು, ಸಾರ್ವಜನಿಕರು ಬರದಂತೆ ನಿರ್ಬಂಧ ಹೇರಿ, ಯಾರೂ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳಿ ಎಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ. ಅದರಂತೆ ಅವರಿಗೆ ರಕ್ಷಣೆ ನೀಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಸುಜಾತ ಭಟ್ಗೆ ವಿಚಾರಣೆಗೆ ಹಾಜರಾಗುವಂತೆ ಬಿಎನ್ಎಸ್ 131 ಸೆಕ್ಷನ್ನಡಿ ಎಸ್ಐಟಿ ನೋಟಿಸ್ ನೀಡಿತ್ತು. ಆದರೆ ಆರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.
ಆದರೆ ಸೆಕ್ಷನ್ ಬಿಎನ್ಎಸ್ 180 ಅಡಿ ಸುಜಾತ ಭಟ್ ಹೇಳಿಕೆ ದಾಖಲಿಸಲು ಅವಕಾಶವಿದ್ದು, ವಿಡಿಯೋ ರೆಕಾರ್ಡ್ ಮೂಲಕ ವಿಚಾರಣೆ ನಡೆಸಲಿದ್ದಾರೆ. ಇಬಿಎನ್ಎಸ್ ಕಾಯ್ದೆ ಪ್ರಕಾರ ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟಿದ್ರೆ ಅಥವಾ 18 ವರ್ಷದ ಒಳಗಿನವರಾಗಿದ್ದರೆ ದೂರುದಾರ/ಸಾಕ್ಷಿದಾರರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಬಹುದು.
ಅದರಂತೆ ಸುಜಾತ ಭಟ್ಗೆ ವಯಸ್ಸಾಗಿರುವುದರಿಂದ ಎಸ್ಐಟಿ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.