ಆರೋಗ್ಯ ಸರಿ ಇಲ್ಲ, ಬೆದರಿಕೆ ಇದೆ ರಕ್ಷಣೆ ನೀಡಿ: ಸುಜಾತ ಭಟ್

ಆರೋಗ್ಯ ಸರಿ ಇಲ್ಲ, ಬೆದರಿಕೆ ಇದೆ ರಕ್ಷಣೆ ನೀಡಿ: ಸುಜಾತ ಭಟ್


ಮಂಗಳೂರು: 2003ರಲ್ಲಿ ತನ್ನ ಮಗಳು ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿ ಆ ಬಳಿದ ದಿನಕ್ಕೊಂದು ಗೊಂದಲಕಾರಿ ಹೇಳಿಕೆ ನೀಡಿ ಪ್ರಕರಣವನ್ನು ಸಂಪೂರ್ಣ ಗೋಜಲು ಮಾಡಿರುವ ಅನನ್ಯಾ ಭಟ್ ತಾಯಿ ಸುಜಾತ ಭಟ್ ಇದೀಗ ನನಗೆ ಆರೋಗ್ಯ ಸರಿಯಿಲ್ಲ, ಬೆದರಿಕೆ ಇದೆ. ನನಗೆ ರಕ್ಷಣೆ ಕೊಡಿ ಎಂದು ಪೊಲೀಸರಿ ಮನವಿ ಮಾಡಿದ್ದಾರೆ.

ನಿನ್ನೆಯಷ್ಟೇ ಖಾಸಗಿ ಯುಟ್ಯೂಬ್ ನಲ್ಲಿ ಸಂದರ್ಶನದ ವೇಳೆ ‘ನನಗೆ ಅನನ್ಯಾ ಭಟ್ ಎಂಬ ಪುತ್ರಿಯೇ ಸಂಪೂರ್ಣ ಪ್ರಕರಣವೇ ಸುಳ್ಳು ಎಂದಿದ್ದ ಸುಜಾತ ಭಟ್ ನಂತರ ನನಗೆ ಮಗಳಿದ್ದಾಳೆ ಎಂದು ಉಲ್ಟಾ ಹೊಡೆದಿದ್ದರು.

ಇದೀಗ ಸುಜಾತ ಭಟ್ ನನಗೆ ಜೀವ ಬೆದರಿಕೆಯಿದೆ, ಮನೆಯ ಬಳಿ ಮಾಧ್ಯಮದವರು, ಸಾರ್ವಜನಿಕರು ಬರದಂತೆ ನಿರ್ಬಂಧ ಹೇರಿ, ಯಾರೂ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳಿ ಎಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ. ಅದರಂತೆ ಅವರಿಗೆ ರಕ್ಷಣೆ ನೀಡಲಾಗಿದೆ ಎನ್ನಲಾಗಿದೆ. ಈ ಹಿಂದೆ ಸುಜಾತ ಭಟ್‌ಗೆ ವಿಚಾರಣೆಗೆ ಹಾಜರಾಗುವಂತೆ ಬಿಎನ್‌ಎಸ್ 131 ಸೆಕ್ಷನ್‌ನಡಿ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ಆರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.

ಆದರೆ ಸೆಕ್ಷನ್ ಬಿಎನ್‌ಎಸ್ 180 ಅಡಿ ಸುಜಾತ ಭಟ್ ಹೇಳಿಕೆ ದಾಖಲಿಸಲು ಅವಕಾಶವಿದ್ದು, ವಿಡಿಯೋ ರೆಕಾರ್ಡ್ ಮೂಲಕ ವಿಚಾರಣೆ ನಡೆಸಲಿದ್ದಾರೆ. ಇಬಿಎನ್‌ಎಸ್ ಕಾಯ್ದೆ ಪ್ರಕಾರ ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟಿದ್ರೆ ಅಥವಾ 18 ವರ್ಷದ ಒಳಗಿನವರಾಗಿದ್ದರೆ  ದೂರುದಾರ/ಸಾಕ್ಷಿದಾರರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಬಹುದು.

ಅದರಂತೆ ಸುಜಾತ ಭಟ್‌ಗೆ ವಯಸ್ಸಾಗಿರುವುದರಿಂದ ಎಸ್‌ಐಟಿ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article