
ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣಗಳ ಕುಖ್ಯಾತ ಆರೋಪಿಯ ಬಂಧನ
Monday, August 4, 2025
ಮಂಗಳೂರು: ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣಗಳ ಕುಖ್ಯಾತ ಆರೋಪಿಯನ್ನು ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಾಸನ ಮೂಲದ, ಮಂಗಳೂರಿನ ತಲಪಾಡಿ ಎಂಬಲ್ಲಿ ವಾಸವಿದ್ದ ಅಕ್ಬರ್ ಸೊಹೈಬ್ (24) ಎಂದು ಗುರುತಿಸಲಾಗಿದೆ.
ಬಂಧಿತನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಬಂಟ್ವಾಳ ನಗರ ಠಾಣೆ, ಉಳ್ಳಾಲ ಪೊಲೀಸ್ ಠಾಣೆ ಹಾಗೂ ಕೇರಳದ ಕನಪ್ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷ ಕೌಶಿಕ್ ಅವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣೆಯ ಸಿಬ್ಬಂದಿಗಳಾದ ಶಿವರಾಮ ರೈ, ಶ್ರೀಶೈಲ ಎಂ.ಕೆ., ಮೊಹಮ್ಮದ್ ಮೌಲನಾ ಎಂಬವವರು ಭಾಗವಹಿಸಿ ಆ.4 ರಂದು ಆರೋಪಿಯನ್ನು ಬಂಧಿಸಿದ್ದಾರೆ.