ಕ್ರೈಸ್ತ ಸಮುದಾಯದ ಬಗ್ಗೆ ಜನಾರ್ದನ ಪೂಜಾರಿ ಅವಮಾನಕಾರಿ ಹೇಳಿಕೆ: ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್

ಕ್ರೈಸ್ತ ಸಮುದಾಯದ ಬಗ್ಗೆ ಜನಾರ್ದನ ಪೂಜಾರಿ ಅವಮಾನಕಾರಿ ಹೇಳಿಕೆ: ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್


ಮಂಗಳೂರು: ಕೇಂದ್ರದ ಮಾಜಿ ಸಚಿವರಾದ, ಕ್ರೈಸ್ತ ಸಮುದಾಯ ಗೌರವಿಸುವ ಜನಾರ್ದನ ಪೂಜಾರಿಯವರು ಇತ್ತೀಚೆಗೆ ಕ್ರೈಸ್ತ ಧರ್ಮದವರು ಚರ್ಚ್‌ಗಳಲ್ಲಿ ಶವಗಳನ್ನು ಹೂತಿಡಲಿಲ್ಲವಾ, ಯಾಕೆ ಹೂತಿಟ್ಟಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿದ್ದು, ಇದನ್ನು ಖಂಡಿಸುವುದಾಗಿ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್ ಹೇಳಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ್‌ನ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜಾ, ಕ್ರೈಸ್ತ ಸಮುದಾಯವು ಮರಣ ಹೊಂದಿದವರ ದೇಹವನ್ನು ಅತೀ ಪಾವಿತ್ರ್ಯತೆಯ ಭಾವನೆಯಿಂದ ಸಂಭೋಧಿಸುತ್ತದೆ. ಮಾತ್ರವಲ್ಲದೆ, ಕಳೆದ 50 ವರ್ಷಗಳ ಇತಿಹಾಸದಲ್ಲಿ ಚರ್ಚ್‌ಗಳಲ್ಲಿ ನಿಗದಿಪಡಿಸಿದ ದಫನ ಭೂಮಿಯಲ್ಲಿ ಕ್ರೈಸ್ತರ ಮೃತದೇಹವನ್ನು ಕಾನೂನು ರೀತಿಯಲ್ಲಿ ನಡೆಸುತ್ತಾ ಬರಲಾಗುತ್ತಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಕ್ರೈಸ್ತ ಧರ್ಮದವರ ಬಗ್ಗೆ ಜನಾರ್ದನ ಪೂಜಾರಿ ಪ್ರಶ್ನಿಸಿದ್ದಾರೆ. ಇದರಿಂದ ಸಮುದಾಯಕ್ಕೆ ಅತೀವ ನೋವಾಗಿದೆ. ಕ್ರೈಸ್ತ ಧರ್ಮದವರು ಸಹಜ ರೀತಿಯಲ್ಲಿ ಅನಾರೋಗ್ಯ ಪೀಡಿತರಾಗಿ ಅಥವಾ ವಯೋಮಿತಿ ದಾಟಿ ಮರಣ ಹೊಂದಿದಾಗ ವೈದ್ಯಕೀಯ ದಾಖಲೆ ಪಡೆದು ಹಾಗೂ ಅಪಘಾತ ಅಥವಾ ಆತ್ಮಹತ್ಯೆ ಸಂದರ್ಭ ಪೊಲೀಸ್ ಇಲಾಖೆ ಹಾಗೂ ವೈದ್ಯಕೀಯ ವಿಧಿ ವಿಧಾನ ಅನುಸರಿಸಿ ಅನುಮತಿ ಪತ್ರ ಪಡೆದು ಕಾನೂನು ಬದ್ಧವಾಗಿ ಆಯಾ ಚರ್ಚ್‌ಗಳಲ್ಲಿ ಶವ ಸಂಸ್ಕಾರ ಮಾಡುವ ಪಕ್ರಿಯೆ ನಡೆಸಲಾಗುತ್ತದೆ. 

ಮೃತ ದೇಹ ಹೂತಿಟ್ಟ ಮೇಲೆ ಮಣ್ಣು ಹಾಕಿ ಅದರ ಮೇಲೆ ಕಾಂಕ್ರೀಟಿನ ಶಿಲುಬೆಯಲ್ಲಿ ಅವರ ಜನನ, ಮದುವೆ ಹಾಗೂ ಮರಣ ದಿನಾಂಕ ನಮೂದಿಸಿ ಚರ್ಚ್‌ನ ಧರ್ಮಗುರುಗಳ ಕಚೇರಿಯ ದಾಖಲೆ ಪುಸ್ತಕದಲ್ಲಿ ವಿವರವಾಗಿ ನಮೂದಿಸಿ ಮೃತರ ಆತ್ಮಕ್ಕೆ ಸದ್ಗತಿ ನೀಡುವ ಸಾಮೂಹಿಕ ಪ್ರಾರ್ಥನೆಯನ್ನು ಕಾಲಾನುಸಾರವಾಗಿ ನಡೆಸಲಾಗುತ್ತದೆ. ಯಾವ ಸಂದರ್ಭದಲ್ಲಿ ಯಾರು ಕೇಳಿದರೂ ಸಮುದಾಯದ ಮೃತರ ಜನನ ಹಾಗೂ ಮರಣ ದಾಖಲೆಗಳು ಕಚೇರಿಯ ಪುಸ್ತಕದಲ್ಲಿರುತ್ತವೆ. ಹಾಗಾಗಿ ಕಾರಣವಿಲ್ಲದೆ ಜನಾರ್ದನ ಪೂಜಾರಿಯವರು ಕ್ರೈಸ್ತ ಧರ್ಮದ ಶವ ಸಂಸ್ಕಾರದ ಬಗ್ಗೆ ಉಲ್ಲೇಖಿಸಿರುವ ಬಗ್ಗೆ ನೋವಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೌಲ್ ರೋಲ್ಫಿ ಡಿಕೋಸ್ತಾ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೆರೋ, ಸಹ ಕಾರ್ಯದರ್ಶಿ ಆಲ್ವಿನ್ ರಾಡ್ರಿಗಸ್, ನಿಕಟಪೂರ್ವ ಅಧ್ಯಕ, ಆಲ್ವಿನ್ ಡಿಸೋಜಾ, ಮಾಜಿ ಅಧ್ಯಕ್ಷ ಸ್ಟೇನಿ ಲೋಬೋ, ಅಂತರ್ ಧರ್ಮೀಯ ಸಮಿತಿ ಸಂಚಾಲಕ ಅರುಣ್ ಡಿಸೋಜಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article