ಇರುವೈಲಿನಲ್ಲಿ ಉಚಿತ ಆರೋಗ್ಯ ತಪಸಣೆ
ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಜೀವನ ನಡೆಸಲು ನಾವು ನಮ್ಮ ಶರೀರವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಮುಖ್ಯ. ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಶಿಬಿರಗಳು ನಡೆದಾಗ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಟೀಲು ಶ್ರೀ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ಹಿರಿಯ ವೈದ್ಯರಾದ ಶಿವಾನಂದ ಮಾತನಾಡಿ, ಶರೀರವನ್ನು ಸಂರಕ್ಷಣೆ ಮಾಡಿದರೆ ಧರ್ಮದ ಕೆಲಸವನ್ನು ಮಾಡಲು ಸಾಧ್ಯ. ನಾವು ಕೃಷಿಕರು ಗಟ್ಟಿಮುಟ್ಟಾಗಿದ್ದೆವೆಂದು ದೇಹ ಶಿಥಿಲವಾಸ್ಥೆಯಲ್ಲಿ ಹೋಗುವವರೆಗೂ ಕಾಯುವುದಲ್ಲ. ಮುಂಜಾಗೃತಿ ವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕ ರಮೇಶ್ ನಾಯಕ್ ಮೈರ ಮಾತನಾಡಿ, ಯಾವುದೇ ಸಾಧನೆ ಮಾಡಬೇಕಾದರೆ ನಮಗೆ ಆರೋಗ್ಯವೇ ಮುಖ್ಯ. ಊರಿನವರೆಲ್ಲಾ ಸೇರಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಶೆಟ್ಟಿ, ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ್, ದ.ಕ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘದ ಅಧ್ಯಕ್ಷ ದಯಾನಂದ ನಾಯಕ್ ಬೆಳ್ತಂಗಡಿ, ಫಲ್ಗುಣಿ ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಆಚಾರ್ಯ, ಪಂಚಾಯತ್ ಸದಸ್ಯ ನಾಗೇಶ್ ಅಮೀನ್, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶುಭಕರ ಕಾಜವ, ಪೂವಪ್ಪ ಸಾಲ್ಯಾನ್, ಮೋಹನ್ ನಾಯಕ್ ಪಂಜ, ಪ್ರದೀಪ್ ಶೆಟ್ಟಿ, ಶಿವಾನಂದ ನಾಯ್ಕ್ ಕಟ್ಟಣಿಗೆ, ದೀಪಾ ದಿನೇಶ್ ಹಾಗೂ ವಾಸುದೇವ ಸಾಮಂತ್, ಕುಮಾರ್ ಪೂಜಾರಿ ಉಪಸ್ಥಿತರಿದ್ದರು.
