
ವಿಶ್ವ ಹಿಂದೂ ಪರಿಷತ್ತಿನ ಹಿತೈಷಿಗಳು ಮಾಜಿ ಮುಡಾ ಅಧ್ಯಕ್ಷರಾದ ರಮೇಶ್ ನಿಧನ: ವಿ.ಹೆಚ್.ಪಿ. ಸಂತಾಪ
Saturday, August 9, 2025
ಮಂಗಳೂರು: ವಿಶ್ವ ಹಿಂದೂ ಪರಿಷತ್ತಿನ ಹಿತೈಷಿಗಳು ಮಾಜಿ ಮುಡಾ ಅಧ್ಯಕ್ಷರಾದ ರಮೇಶ್ ಅವರು ಇಂದು ನಿಧನರಾಗಿದ್ದು, ಅವರ ನಿಧನಕ್ಕೆ ವಿಶ್ವ ಹಿಂದೂ ಪರಿಷದ್ ಸಂತಾಪ ಸೂಚಿಸಿದೆ.
ಶಿಲ್ಪ ಕಲರ್ ಲ್ಯಾಬ್ ನ ಮಾಲಕರು, ಮಾಜಿ ಮುಡಾ ಅಧ್ಯಕ್ಷ ರಮೇಶಣ್ಣ ಇಂದು ಇಹಲೋಕ ತ್ಯಜಿಸಿದರು, ವಿಶ್ವ ಹಿಂದೂ ಪರಿಷತ್ತಿನ ಹಿತೈಷಿಗಳಾದ ರಮೇಶಣ್ಣ ರಾಮಸೇತು ಉಳಿಸಿ ಆಂದೋಲನದ ಮಂಗಳೂರಿನಲ್ಲಿ ನೇತೃತ್ವ ವಹಿಸಿದ್ದವರು, ಸರಳ ಸಜ್ಜನಿಕೆಯ ರಾಜಕಾರಣಿ, ಎಲ್ಲರಲ್ಲೂ ಬೆರೆಯುವ ಅತ್ಯಂತ ಮೃದುಸ್ವಭಾವದವರು, ಇವರ ಅಗಲುವಿಕೆ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ, ನಿಮ್ಮ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಮನೆಯವರಿಗೆ, ಅಪಾರ ಬಂಧು ಮಿತ್ರರಿಗೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಸಂತಾಪ ಸೂಚಿಸಿದರು.