
ಪಳಕಳ ಮಿತ್ರ ಮಂಡಳಿಯಿಂದ 5ನೇ ವಷ೯ದ ಕೆಸರ್ಡ್ ಒಂಜಿ ದಿನ
ಸನ್ಮಾನ: ಮೆಸ್ಕಾಂ ಲೈನ್‌ಮ್ಯಾನ್ ರಮೇಶ್, ಪಿಎಚ್‌ಡಿ ಪದವೀಧರ ಹರಿದಾಸ್ ಕಾರಂತ್, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿರುವ ಸತ್ಯಶ್ರೀ ಭಜನಾ ಮಂಡಳಿಯ ಸದಸ್ಯರಾದ ಪ್ರಣೀತ್ ಹಾಗೂ ತನುಷ್ ಅವರನ್ನು ಸನ್ಮಾನಿಸಲಾಯಿತು.
ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಪುತ್ತಿಗೆ ಗ್ರಾಪಂ ಸದಸ್ಯರಾದ ಮಿಲನ್ ಶರೀಫ್, ಪುರುಷೋತ್ತಮ ನಾಯಕ್, ಶಶಿಧರ್ ಅಂಚನ್, ಬಿಜೆಪಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಬಿಜೆಪಿ ಮಂಡಲದ ಯುವ ಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್, ಮೂಡುಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಕೃಷಿಕ ಉದಯ ಕುಮಾರ್ ದೇವಾಡಿಗ, ಬಿಜೆಪಿ ನಗರ ಪ್ರಮುಖ್ ಸಾತ್ವಿಕ್ ಮಲ್ಯ, ಉದ್ಯಮಿಗಳಾದ ಅಬು ಅಲಾ ಪುತ್ತಿಗೆ, ರಾಜೇಶ್ ಮಲ್ಯ, ಬೋಳ ವಿಶ್ವನಾಥ ಕಾಮತ್, ಅನೀಶ್ ಡಿಸೋಜ, ರಾಜೇಶ್ ಕಡಲಕೆರೆ, ಯಶವಂತ ಭಂಡಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಳಕಳ ಮಿತ್ರ ಮಂಡಳಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಅಶ್ವಿತ್, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಕೋಶಾಧಿಕಾರಿಗಳಾದ ತೇಜಸ್‌ದಾಸ್, ವರುಣ್ ಪೂಜಾರಿ, ಕಾರ್ಯದರ್ಶಿ ರಾಘವೇಂದ್ರ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ ನಾಗೇಶ್ ಕುಲಾಲ್, ಜೊತೆ ಕಾರ್ಯದರ್ಶಿ ಶ್ರೀನಾಥ್ ಕುಲಾಲ್, ಕಾರ್ಯಕ್ರಮದ ಸಂಚಾಲಕ ಸಚಿನ್ ಕುಮಾರ್, ಸಹ ಸಂಚಾಲಕ ಪುರಂದರ ಕುಲಾಲ್, ಕ್ರೀಡಾಕೂಟದ ಮೇಲುಸ್ತುವಾರಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಕಾರ್ತಿಕ್ ಸುವರ್ಣ ಹಾಗೂ ಪ್ರಜ್ಞಾ ನಿರೂಪಿಸಿದರು.