ಮೂಡುಬಿದಿರೆ: ಗ್ರಾಮಾಭಿವೃದ್ಧಿ ಯೋಜನೆಯಿಂದ "ಸ್ವಾಸ್ಥ್ಯ ಸಂಕಲ್ಪ" ಕಾಯ೯ಕ್ರಮ
Thursday, August 7, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಡುಬಿದಿರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಧರ್ಮಸ್ಥಳ ಅಲಂಗಾರು ವಲಯ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಮಹಾವೀರ ಕಾಲೇಜಿನಲ್ಲಿ ಗುರುವಾರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮುನಿರಾಜ ರೇಂಜಾಳ ಅವರು ಸ್ವಾಸ್ತ್ಯ ಸಂಕಲ್ಪ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ದುಶ್ಚಟದಿಂದಾಗುವ ಪರಿಣಾಮದ ಬಗ್ಗೆ, ಮುಂಜಾಗ್ರತಾ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ಧನಂಜಯ ಬಿ. ಪ್ರಸ್ತಾವಿಕವಾಗಿ ಮಾತಾಡಿದರು.
ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ ಮಾಲ೯, ಕೊಡಂಗಲ್ಲು ಒಕ್ಕೂಟದ ಕಾಯ೯ದಶಿ೯ ಹರೀಶ್ ಕುಲಾಲ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಜಯ ಬಿ ಕೋಟ್ಯಾನ್ ಅವರು ಉಪಸ್ಥಿತರಿದ್ದರು.
ಮೇಲ್ವಿಚಾರಕ ಚಂದ್ರಹಾಸ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಮಮತಾ ಅವರು ಕಾಯ೯ಕ್ರಮ ನಿರೂಪಿಸಿದರು. ಅಧ್ಯಾಪಕಿ ಸುಜಾತಾ ವಂದಿಸಿದರು.
