ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ.) ಕಲ್ಲಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ
Thursday, August 7, 2025
ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು-ಕರಿಂಜೆ- ಮಾರೂರು ಇದರ 24ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಗಣೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಕೆ. ಶ್ರೀಪತಿ ಭಟ್, ಶಿಕಾರಿಪುರ ಈಶ್ವರ ಭಟ್, ಜಿ.ಕೆ. ಭಟ್, ದಿನೇಶ್ ಆಚಾರ್ಯ, ಕೃಷ್ಣಪ್ಪ, ಸುಧೀರ್ ಪೈ, ಯೋಗೀಶ್ ಪೈ ಹಾಗೂ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ವಿಶಾಲ್ ಮಾರೂರು ಹಾಗೂ ಸದಸ್ಯರಾದ ಸುಶಾಂತ್ ಕರ್ಕೇರ, ಪ್ರವೀಣ್ ಮಾರೂರು, ಪ್ರಣಾಮ್ ಎಂ. ಬಿ. ಉಪಸ್ಥಿತರಿದ್ದರು.