ಇರುವೈಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಅಡುಗೆ ಸಹಾಯಕಿಗೆ ಬೀಳ್ಕೊಡುಗೆ
ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ದೇಶ ಸ್ವಾವಲಂಬನೆಯನ್ನು ಸಾಧಿಸಿದ ದಿನವನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಲಾಯಿತು. ಸ್ವಾವಲಂಬನೆಯನ್ನು ಸ್ವಾತಂತ್ರ್ಯದೊಂದಿಗೆ ಸಮೀಕರಿಸುವುದು ಸೂಕ್ತವಲ್ಲ. ಸ್ವಾತಂತ್ರ್ಯವೆಂಬುದು ಸ್ವೇಚ್ಛಚಾರ ಅಥವಾ ಸ್ವಾರ್ಥವಾಗಬಾರದು. ಪ್ರತಿ ವ್ಯಕ್ತಿಯೂ ತನ್ನ ಜವಾಬ್ದಾರಿ, ಬದ್ಧತೆಯನ್ನು ಸರಿಯಾಗಿ ನಿರ್ವಹಿಸಿ ಶಿಸ್ತಿನಿಂದ ಕೂಡಿದ ಸಂತೃಪ್ತ ಜೀವನ ನಡೆಸಿದರೆ ಅದೇ ದೊಡ್ದ ಸೇವೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಅಡುಗೆ ಸಹಾಯಕಿ ಶಕುಂತಲಾ ಶೆಣೈ ಅವರನ್ನು ಗೌರವಿಸಿ ಬಿಳ್ಕೋಡಲಾಯಿತು.
ಇರುವೈಲ್ ಗ್ರಾ.ಪಂಚಾಯತ್ ಅಧ್ಯಕ್ಷೆ ಲಲಿತ ಮುಗೇರ, ಸದಸ್ಯರುಗಳಾದ ನವೀನ್ ಪೂಜಾರಿ ಕಿಟ್ಟುಬೆಟ್ಟು, ನಾಗೇಶ್ ಅಮೀನ್ ರುಕ್ಮಿಣಿ, ಮೋಹಿನಿ, ಶಾಲಾ ದಶಮನೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ, ಕೆಡಿಪಿ ಸದಸ್ಯ ಪ್ರವೀಣ್, ಪ್ರಭಾರ ಮುಖ್ಯ ಶಿಕ್ಷಕಿ ಜೆಸಿಂತಾ ಫೆರ್ನಾಂಡೀಸ್ ಉಪಸ್ಥಿತರಿದ್ದರು.
ಶಿಕ್ಷಕಿ ಉಷಾ ಸ್ವಾಗತಿಸಿ, ಶ್ಯಾಮಲಾ ಕಾಯ೯ಕ್ರಮ ನಿರೂಪಿಸಿದರು, ದಿವ್ಯ ಧನ್ಯವಾದಗೈದರು.