ನಿವೃತ್ತ ಮುಖ್ಯೋಪಾಧ್ಯಾಯ, ರಂಗನಟ ಎಚ್. ಶಾಂತಿರಾಜ ಶೆಟ್ಟಿ ನಿಧನ

ನಿವೃತ್ತ ಮುಖ್ಯೋಪಾಧ್ಯಾಯ, ರಂಗನಟ ಎಚ್. ಶಾಂತಿರಾಜ ಶೆಟ್ಟಿ ನಿಧನ


ಮೂಡುಬಿದಿರೆ: ಇಲ್ಲಿನ ಡಿ.ಜೆ. ಅನುದಾನಿತ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ರಂಗ ಕಲಾವಿದ ಎಚ್. ಶಾಂತಿರಾಜ ಶೆಟ್ಟಿ (91) ಅವರು ಭಾನುವಾರ ನಿಧನ ಹೊಂದಿದರು.

1960ರ ಸುಮಾರಿಗೆ ಮೂಡುಬಿದಿರೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ವಾಸುದೇವ ರಾವ್, ಎಂ ಎಸ್.ಜೀವನ್, ವಾಸು ಸಾಲಿಯಾನ್ ಮೊದಲಾದವರ ಉತ್ಸಾಹದಲ್ಲಿ ರೂಪುಗೊಂಡಿದ್ದ ನೂತನ ಕಲಾವೃಂದದ ನಾಟಕಗಳಲ್ಲಿ ಅಭಿನಯಿಸಿದ್ದರು.

ಇಂಗ್ಲಿಷ್ ಪಾಠಮಾಡುವುದರಲ್ಲಿ ಪರಿಣತರಾಗಿದ್ದರು, ವಿದ್ಯಾರ್ಥಿಗಳ ಕ್ಷೇಮಪಾಲನ ಮೆಚ್ಚುಗೆಗೆ ಪಾತ್ರರಾಗಿದ್ದರು.ಜೈನ ಧಾರ್ಮಿಕ ಉತ್ಸವಗಳಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ಶಿಸ್ತು, ಬದ್ಧತೆಗೆ ಆದ್ಯತೆ ನೀಡಿದ್ದರು.ಅವರ ಶಿಷ್ಯರಾದವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದರು.

ಪತ್ನಿ, ಹವ್ಯಾಸಿ ಪತ್ರಕರ್ತ ಯತಿರಾಜ ಶೆಟ್ಟಿ ಸಹಿತ ಮೂವರು ಪುತ್ರರನ್ನು ಅವರು ಆಗಲಿದ್ದಾರೆ.

ಮಾಜಿ ಸಚಿವ ಅಭಯಚಂದ್ರ, ಡಾ ಮೋಹನ ಆಳ್ವ, 'ಮೂಡ' ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಅರಳ ರಾಜೇಂದ್ರ ಶೆಟ್ಟಿ, ಎಂ. ಬಾಹುಬಲಿ ಪ್ರಸಾದ್, ಹೇಮರಾಜ್ ಬೆಳ್ಳಿಬೀಡು ಚೌಟರ ಅರಮನೆ ಕುಲ ದೀಪ ಎಂ., ಶ್ವೇತಾ ಜೈನ್ ಸಹಿತ ಗಣ್ಯರು ಮೃತರ ಅಂತಿಮ ದರ್ಶನಗೈದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article