ವಿಶ್ವ ಸ್ತನ್ಯಪಾನ ಸಪ್ತಾಹ: ಮಹಿಳೆಯರು ಸ್ತನ್ಯಪಾನದ ಮಹತ್ವವನ್ನು ಅರಿತುಕೊಳ್ಳಿ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಗಿ ಅವರು ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸ್ತನ್ಯಪಾನದ ಮಹತ್ವವನ್ನು ಅರಿತುಕೊಳ್ಳಿ ಹಾಗೂ ಮಹಿಳೆಯರಿಗೆ ಅದರ ಅರಿವನ್ನು ಮೂಡಿಸುವಲ್ಲಿ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಜವಾಬ್ದಾರಿಗಳನ್ನು ತಿಳಿಸಿದ ಅವರು ಇನ್ನರ್ ವೀಲ್ ಕ್ಲಬ್ ನ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಪುರಸಭಾ ಸದಸ್ಯೆ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಮೂಡುಬಿದಿರೆ ಆಡಳಿತ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಎದೆ ಹಾಲಿನಿಂದ ತಾಯಿಗೆ ಮತ್ತೆ ಮಗುವಿಗೆ ಆಗುವ ಪ್ರಯೋಜನಗಳು, ಎದೆ ಹಾಲು ಉಣಿಸುವಿಕೆಗೆ ಕುಟುಂಬ ಹಾಗೂ ಸಮಾಜದ ಪ್ರೋತ್ಸಾಹದ ಅಗತ್ಯತೆ, ಸ್ವಚ್ಛತಾ ಕ್ರಮಗಳು, ಪಾಲಿಸಬೇಕಾದ ಆಹಾರ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ, ನ್ಯಾಯವಾದಿ ಶ್ವೇತಾ ಜೈನ್ ಮಾತನಾಡಿ ಶಿಶುವಿನ ಸರ್ವತೋಮುಖ ಅಭಿವೃದ್ಧಿಗೆ ಸ್ತನ್ಯಪಾನವು ಪೂರಕವಾಗಿದೆ ಎಂದು ಹೇಳಿದರು.
ಪುರಸಭಾ ಸದಸ್ಯ ಪುರಂದರ ದೇವಾಡಿಗ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಪುಚ್ಚೇರಿ ಕಟ್ಟೆ ಅಂಗನವಾಡಿ ಕಾರ್ಯಕರ್ತೆ ವಿಜಯ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಭಾಗವಹಿಸಿದ್ದ ತಾಯಂದಿರಿಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಪ್ರೋತ್ಸಾಹದಾಯಕ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಅನಿತಾ ಪೃಥ್ವಿರಾಜ್, ಸಂಯೋಜಕಿ ಸುಜಾತ ಜೈನ್, ಶಾಲಿನಿ ನಾಯಕ್, ಪ್ರಕಾಶಿನಿ ಹೆಗ್ಡೆ, ಸುಜಯ ವೇದ ಕುಮಾರ್, ರತ್ನ ಪರಾಡ್ಕರ್, ವೀಣಾ ಜೈನ್, ಸ್ವಾತಿ ಬೋರ್ಕರ್ ಉಪಸ್ಥಿತರಿದ್ದರು.
ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಶಾಲಾ ಸಹ ಶಿಕ್ಷಕಿ ಪ್ಲಾವಿಯಾ ಅಂಗನವಾಡಿ ಕಾರ್ಯಕರ್ತೆಯರಾದ ಸುಮತಿ, ವಿಜಯ, ಹೇಮಾವತಿ,ನಿರ್ಮಲ, ಪ್ರಿಯದರ್ಶಿನಿ ಎಸ್ ಜೈನ್, ವಿದ್ಯಾ, ಸಹಾಯಕಿ ಮಂಜವ್ವ,ಆರೋಗ್ಯ ಇಲಾಖೆಯ ಸಿಬ್ಬಂದಿ ಅನ್ನಪೂರ್ಣ ಬಾಲ ವಿಕಾಸ ಸಮಿತಿ ಸದಸ್ಯರು,ತಾಯಂದಿರು ಪುಟಾಣಿಗಳು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಡುಬಿದಿರೆ ವಲಯದ ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಸ್ವಾಗತಿಸಿ, ಪ್ರಿಯದರ್ಶಿನಿ ಎಸ್. ಜೈನ್ ಕಾಯ೯ಕ್ರಮ ನಿರೂಪಿಸಿದರು. ಸುಮತಿ ವಂದಿಸಿದರು.

