ಮರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಮುದ್ದುಕೃಷ್ಣ ಸ್ಪಧೆ೯
Saturday, August 16, 2025
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮುದ್ದು ಕೃಷ್ಣ ಸ್ಪಧೆ೯ ನಡೆಯಿತು.
ಪುರಸಭೆ ಸದಸ್ಯೆ ಮಮತ ಆನಂದ ಸ್ಪಧೆ೯ಯನ್ನು ಉದ್ಘಾಟಿಸಿದರು.
ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ., ಮಾಜಿ ಅಧ್ಯಕ್ಷ ಪೂರ್ಣಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಆರ್. ಶೆಟ್ಟಿ, ಅಂಗನವಾಡಿ ಶಿಕ್ಷಕಿ ಹೇಮಾವತಿ ಆರ್. ಪೂಜಾರಿ, ಸುಜಯ ಜೈನ್, ಪತ್ರಕರ್ತ ಪ್ರಸನ್ನ ಹೆಗ್ಡೆ, ತೀರ್ಪುಗಾರರಾದ ಕಾಂತಿ ಭಟ್, ಪ್ರಜ್ವಲ್ ಶೆಟ್ಟಿ ಮತ್ತಿತರರು ಇದ್ದರು