ನಿಡ್ಡೋಡಿ ಲವ್ಲೀ ಸ್ಪೋಟ್ಸ್& ಗೇಮ್ಸ್ ಕ್ಲಬ್ ನ ಅಧ್ಯಕ್ಷರಾಗಿ ಬಿ. ಆರ್. ಪ್ರಸಾದ್, ಕಾಯ೯ದಶಿ೯ಯಾಗಿ ಸುಂದರ್ ಪೂಜಾರಿ ಆಯ್ಕೆ
Wednesday, August 20, 2025
ಮೂಡುಬಿದಿರೆ: ನಿಡ್ಡೋಡಿಯ ಲವ್ಲಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ನ 2025-26 ನೇ ಸಾಲಿನ ಅಧ್ಯಕ್ಷರಾಗಿ ಬಿ.ಆರ್.ಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಜಯ ಪೂಜಾರಿಯವರು ಪುನರಾಯ್ಕೆಗೊಂಡಿದ್ದು ಕಾರ್ಯದರ್ಶಿಯಾಗಿ ಸುಂದರ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಇತರ ಪದಾಧಿಕಾರಿಗಳು:
ಜಗದೀಶ್ ಕುಲಾಲ್( ಸಂಚಾಲಕರು),ಶರತ್ ಅಜಾರ್ ( ಜೊತೆ ಕಾರ್ಯದರ್ಶಿ), ಶಿವರಾಜ್ ( ಕೋಶಾಧಿಕಾರಿ) ಹರೀಶ ಪೈಕ ( ಕ್ರೀಡಾ ಕಾರ್ಯದರ್ಶಿ),ರಾಜೇಶ್ ಶೆಟ್ಟಿ ತಂಡದ ಕಪ್ತಾನ),ಸಚಿನ್ ಅಜಾರ್ ( ಉಪಕಪ್ತಾನ),ತಿಲಕ್ ( ವಾಲಿಬಾಲ್ ತಂಡದ ಕಪ್ತಾನ), ಹರೀಶ್ ಕೋಟ್ಯಾನ್ ( ಲೆಕ್ಕ ಪರಿಶೋಧಕ),ಸುಧೀರ್ ( ಸಾಮಾಜಿಕ ಜಾಲತಾಣದ ಪ್ರಮುಖ),ಸುಜಿತ್ ಸುವರ್ಣ (ಜೂನಿಯರ್ ವಿಭಾಗದ ನಾಯಕ) ಹಾಗೂ ಸಲಹಾ ಸಮಿತಿಯ ಅಧ್ಯಕ್ಷರಾಗಿ ಜಯಶೀಲ ಶೆಟ್ಟಿ, ಸದಸ್ಯರಾಗಿ ಲೋಕೇಶ್ ಶೆಟ್ಟಿ, ಶಶಿಕಿರಣ್ ಸುವರ್ಣ,ನಂದೀಶ್ ಕೋಟ್ಯಾನ್, ಶಿವಾನಂದ ಸುವರ್ಣ, ಪ್ರದೀಪ್ ಶೆಟ್ಟಿ ಹಾಗೂ ಸುನಿಲ್ ಅರನ್ಹ ಅವರು ಆಯ್ಕೆಯಾಗಿದ್ದಾರೆ.
ಅಶ್ವಥ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.