ಆ.24 ರಂದು ಮೂಡುಬಿದಿರೆಯಲ್ಲಿ ಜೈನ ವಧು-ವರರ ವೇದಿಕೆಯಿಂದ ರಾಜ್ಯಮಟ್ಟದ ಪರಿಚಯ ಸಂಪಕ೯ ಹಾಗೂ ಸಮ್ಮೇಳನ

ಆ.24 ರಂದು ಮೂಡುಬಿದಿರೆಯಲ್ಲಿ ಜೈನ ವಧು-ವರರ ವೇದಿಕೆಯಿಂದ ರಾಜ್ಯಮಟ್ಟದ ಪರಿಚಯ ಸಂಪಕ೯ ಹಾಗೂ ಸಮ್ಮೇಳನ


ಮೂಡುಬಿದಿರೆ: ಚಿಗುರು ಆಲ್ ಇಂಡಿಯಾ ಜೈನ ವಧು-ವರರ ವೇದಿಕೆಯ ಆಶ್ರಯದಲ್ಲಿ ರಾಜ್ಯಮಟ್ಟದ ಪರಿಚಯ, ಸಂಪರ್ಕ ಹಾಗೂ ಸಮ್ಮೇಳನ 2025 ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ಸಭಾಭವನದಲ್ಲಿ ಆ.24ರಂದು ಬೆಳಗ್ಗೆ 9 ಗಂಟೆಯಿಂದ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಸುಭಾಶ್ಚಂದ್ರ  ಚೌಟ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 9 ಗಂಟೆಯಿಂದ ನೋಂದಣಿ ಪ್ರಾರಂಭಗೊಳ್ಳಲಿದ್ದು, 10 ಗಂಟೆಯ ಬಳಿಕ ವಧು-ವರರ ಪರಿಚಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ವೆಬ್‌ಸೈಟ್ ಲೋಕಾರ್ಪಣೆಗೊಳಿಸುವರು. ಚೌಟರ ಅರಮನೆಯ ಕುಲದೀಪ ಎಂ., ಶ್ರೀಕ್ಷೇತ್ರ ಪಡ್ಯಾರಬೆಟ್ಟುವಿನ ಆಡಳಿತ ಮೊಕ್ತೇಸರ ಎ.ಜೀವಂಧರ್ ಕುಮಾರ್, ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸಹಿತ ಗಣ್ಯರು ಭಾಗವಹಿಸುವರು. ಈಗಾಗಲೇ 1 ಸಾವಿರ ಅಧಿಕ ಮಂದಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ವೇದಿಕೆಯ ಸಂಚಾಲಕ ಸಂಪತ್ ಜೈನ್, ಪ್ರಮುಖರಾದ ಆದಿರಾಜ ಜೈನ್, ಸನತ್ ಕುಮಾರ್ ಜೈನ್ ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article