ಸದ್ಭಾವನಾ ದಿನಾಚರಣೆ: ‘ಪರಸ್ಪರ ಸೌಹಾರ್ದತೆಯಿಂದ ರಾಷ್ಟ್ರ ಸದೃಢವಾಗುತ್ತದೆ’ ಡಾ.ವಿಜಯಕುಮಾರ್ ಮೊಳೆಯಾರ್
Wednesday, August 20, 2025
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆಯ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನು ಇಂದು ಆಯೋಜಿಸಲಾಯಿತು.
ಕಾಲೇಜಿನ ಉಪಪ್ರಾಚಾರ್ಯ ಡಾ. ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ಪರಸ್ಪರ ಸೌಹಾರ್ದತೆಯಿಂದ ರಾಷ್ಟ್ರ ಸದೃಢವಾಗುತ್ತದೆ. ವಿದ್ಯಾರ್ಥಿಗಳು ಧರ್ಮ, ಭಾಷೆ ಹಾಗೂ ಮತೀಯ ಕಲ್ಪನೆಗಳನ್ನು ಮೀರಿ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಂಡು ಸದ್ಭಾವನೆಯನ್ನು ಮೂಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ವಂದಿಸಿದರು.


